ಮನೋರಂಜನೆ

ಟೀಂ ಇಂಡಿಯಾದ ನಾಯಕತ್ವಕ್ಕೆ ಸಂಬಧಿಸಿ ಕೊಹ್ಲಿ ಬಗ್ಗೆ ಸುನಿಲ್ ಗಾವಸ್ಕರ್ ಹೇಳಿದ್ದೇನು…?

Pinterest LinkedIn Tumblr

Virat Kohli, Sunil Gavaskar

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿಗೆ ಏಕಾಏಕಿ ಎಲ್ಲ ಮಾದರಿಯ ನಾಯಕತ್ವ ಬೇಡ ಎಂದು ಕ್ರಿಕೆಟ್ ದಿಗ್ಗಜ ಸುನಿಲ್ ಗಾವಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

ಟೀಂ ಇಂಡಿಯಾದ ಸೀಮಿತ ಓವರ್ ಗಳ ನಾಯಕ ಎಂಎಸ್ ಧೋನಿ ನಾಯಕತ್ವದ ವಿರುದ್ಧ ಮಾಜಿ ಕ್ರಿಕೆಟಿಗ ಸೌರವ್ ಗಂಗೂಲಿ ಅಸಮಾಧಾನ ವ್ಯಕ್ತಪಡಿಸಿದ್ದು, ವಿರಾಟ್ ಕೊಹ್ಲಿಗೆ ನಾಯಕತ್ವ ವಹಿಸುವುದು ಸೂಕ್ತ ಎಂಬ ಮಾತುಗಳನ್ನಾಡಿದ್ದರು.

ಕೊಹ್ಲಿ ನಾಯಕತ್ವ ಕುರಿತಾಗಿ ಪ್ರತಿಕ್ರಿಯಿಸಿರುವ ಗಾವಸ್ಕರ್ ಕೊಹ್ಲಿಗೆ ಇಗಲೇ ಎಲ್ಲಾ ಮಾದರಿಯ ನಾಯಕತ್ವ ವಹಿಸುವುದು ಬೇಡ. ಅವರಿಗೆ ನಾಯಕರಾಗಿ ಬೆಳೆಯಲು ಅವಕಾಶ ನೀಡಬೇಕು . 2019ರ ವಿಶ್ವಕಪ್ ಬಹಳ ದೂರವಿರುವುದರಿಂದ ನಾವು ಗಡಿಬಿಡಿ ಮಾಡಬಾರದು ಎಂದು ಹೇಳಿದ್ದಾರೆ.

ಇತ್ತೀಚೆಗಷ್ಟೇ ಸುದ್ದಿ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಗಂಗೂಲಿ, 2019ರಲ್ಲಿ ನಡೆಯುವ ಐಸಿಸಿ ವಿಶ್ವಕಪ್ ನಲ್ಲಿ ತಂಡದ ನಾಯಕತ್ವ ವಹಿಸಲು ಧೋನಿಗೆ ಸಾಧ್ಯವಾಗುವುದೇ?. ಧೋನಿಗೆ ನಾಯಕತ್ವ ಕೌಶಲ್ಯದ ಬಗ್ಗೆ ನನಗೇನು ಅನುಮಾನವಿಲ್ಲ. ಆದರೆ ನಾಯಕತ್ವದ ಹೊಣೆಯನ್ನು ಇನ್ನೊಬ್ಬ ಕಿರಿಯನಿಗೆ ದಾಟಿಸುವ ಸಮಯ ಬಂದಿದೆ ಎಂದಿದ್ದರು.

Write A Comment