ಭುವನೇಶ್ವರ್; ಮಹಾತ್ಮ ಗಾಂಧೀಜಿ ಅವರನ್ನು ಕೊಂದ ನಾಥೂರಾಮ್ ಗೋಡ್ಸೆ ಅವರನ್ನು ಹಿಡಿದುಕೊಟ್ಟ ಮೃತ ರಘುನಾಯಕ್ ಅವರ ಪತ್ನಿಗೆ ಒರಿಸ್ಸಾ ಸರ್ಕಾರ ಐದು ಲಕ್ಷ ರೂ ಧನ ಸಹಾಯ ನೀಡಲಾಗಿದೆ.
ರಘುನಾಯಕ್ ಸತ್ತ 33 ವರ್ಷಗಳ ನಂತರ ಒರಿಸ್ಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಮಂಡೋದರಿ ನಾಯಕ್ ಅವರಿಗೆ 5 ಲಕ್ಷ ರು. ಚೆಕ್ ನೀಡಿದ್ದಾರೆ. ತಮ್ಮ ಕುಟುಂಬ ಸದಸ್ಯರು ಹಾಗೂ ಕೆಂದ್ರಾಪರ ಜಿಲ್ಲಾಧಿಕಾರಿಗಳ ಸಮೇತ ಆಗಮಸಿದ ರಘು ನಾಯಕ್ ಪತ್ನಿ ಮಂಡೋದರಿ ನಾಯಕ್ ಚೆಕ್ ಸ್ವೀಕರಿಸಿದರು.
ಹಿಂದೆ ಮುಂದೆ ನೋಡದೇ ನಾಥುರಾಮ್ ಗೋಡ್ಸೆಯನ್ನು ಹಿಡಿದುಕೊಡಲು ಅಸಾಮಾನ್ಯ ಧೈರ್ಯ ತೋರಿಸಿದ ರಘು ನಾಯಕ್ ಗೆ ಅಂದಿನ ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದ್ ಅವರಿಂದ 500 ರೂ ಉಡುಗೊರೆ ದೊರೆತಿತ್ತು.
1983 ರಲ್ಲಿ ರಘು ನಾಯಕ್ ಮರಣ ಹೊಂದಿದ ನಂತರ ಆಕೆಯ ಪತ್ನಿ ಮತ್ತು ಪುತ್ರಿ ಕಷ್ಟದ ಜೀವನ ನಡೆಸುತ್ತಿದ್ದರು. ಹೀಗಾಗಿ ಒರಿಸ್ಸಾ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 5 ಲಕ್ಷ ರು. ಹಣವನ್ನು ನೀಡಿದೆ.