ರಾಷ್ಟ್ರೀಯ

ಲಿಬಿಯಾದಿಂದ ಸುರಕ್ಷಿತವಾಗಿ ತವರಿಗೆ ಮರಳಿದ 29 ಭಾರತೀಯರು

Pinterest LinkedIn Tumblr

44

ಕೊಚ್ಚಿ: ಲಿಬಿಯಾದಿಂದ 29 ಭಾರತೀಯರನ್ನು ಸುರಕ್ಷಿತರಾಗಿ ಕೇರಳಕ್ಕೆ ಕರೆತರಲಾಗಿದೆ. ಗುರುವಾರ ಬೆಳಗ್ಗೆ ಇವರು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ಬಂದಿಳಿದರು.

ಎಳೆಯ ಮಕ್ಕಳು ಸೇರಿದಂತೆ ಸುರಕ್ಷಿತರಾಗಿ ಬಂದಿಳಿದ 29 ಜನರ ಪೈಕಿ 6 ಕುಟುಂಬದವರು ಕೇರಳ ಮತ್ತು 3 ಕುಟುಂಬದವರು ತಮಿಳುನಾಡಿಗೆ ಸೇರಿದವರಾಗಿದ್ದಾರೆ. ಇವರು ಟ್ರಿಪೊಲಿಯಿಂದ ಇಸ್ತಾಂಬುಲ್ ಮೂಲಕ ಕೊಚ್ಚಿಗೆ ಬಂದಿಳಿದಿದ್ದಾರೆ. ಲಿಬಿಯಾದ ಸಬ್ರತಾ ಪ್ರದೇಶದ ಜಾವಿಯಾ ಆಸ್ಪತ್ರೆಯಲ್ಲಿ ಇವರಲ್ಲಿ ಹೆಚ್ಚಿನ ಮಂದಿ ಕೆಲಸ ಮಾಡುತ್ತಿದ್ದರು.

ಕಳೆದ ಮಾರ್ಚ್ನಲ್ಲಿ ಲಿಬಿಯಾದ ಸಬ್ರತಾ ಪ್ರದೇಶದಲ್ಲಿ ಭಾರತೀಯ ನರ್ಸ್ ನಿವಾಸದ ಮೇಲೆ ಷೆಲ್ ದಾಳಿ ನಡೆದಿತ್ತು. ಘಟನೆಯಲ್ಲಿ ನರ್ಸ್ ಮತ್ತು ಅವರ ಮಗ ಸಾವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಲಿಬಿಯಾದಲ್ಲಿ ಕೆಲಸ ಮಾಡುತ್ತಿರುವ ಭಾರತೀಯರನ್ನು ವಾಪಾಸು ಭಾರತಕ್ಕೆ ಕರೆಸಿಕೊಳ್ಳಬೇಕು ಎಂದು ಕುಟುಂಬಸ್ಥರು ಕೇರಳ ಸರ್ಕಾರಕ್ಕೆ ಮನವಿ ಮಾಡಿದ್ದರು.

ಲಿಬಿಯಾದಿಂದ 29 ಭಾರತೀಯರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಲು ಸಹಕರಿಸಿದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಕೇರಳ ಸರ್ಕಾರ ಅಭಿನಂದನೆ ಸಲ್ಲಿಸಿದೆ.

Write A Comment