ರಾಷ್ಟ್ರೀಯ

ಅನೈತಿಕ ಸಂಬಂಧಕ್ಕೆ ಒಪ್ಪದಿದ್ದಾಗ ಕುಪಿತಗೊಂಡ ಮಹಿಳೆಯಿಂದ ಪಶು ವೈದ್ಯನ ಮೇಲೆ ಆ್ಯಸಿಡ್ ದಾಳಿ

Pinterest LinkedIn Tumblr

acid

ಗಾಜಿಯಾಬಾದ್: ಅನೈತಿಕ ಸಂಬಂಧ ಹೊಂದುವಂತೆ ಪೀಡಿಸುತ್ತಿದ್ದ ಮಹಿಳೆಯ ಬೇಡಿಕೆಯನ್ನು ತಿರಸ್ಕರಿಸಿದ್ದರಿಂದ ಆಕ್ರೋಶಗೊಂಡ ಆಕೆ ಪಶು ವೈದ್ಯನ ಮೇಲೆ ಆ್ಯಸಿಡ್ ಹಾಕಿರುವ ಆಘಾತಕಾರಿ ಘಟನೆ ಘಾಜಿಯಾಬಾದ್ ನಲ್ಲಿ ನಡೆದಿದೆ.

28 ವರ್ಷದ ಅಮಿತ್ ವರ್ಮಾ ಅವರ ಮೇಲೆ ಸೋಮವಾರ ಬೆಳಗ್ಗೆ 45 ವರ್ಷದ ಮಹಿಳೆ ಆ್ಯಸಿಡ್ ಎರಚಿದ್ದಾಳೆ. ಕಳೆದ ಎರಡು ವಾರಗಳಿಂದ ತನ್ನ ಜೊತೆ ಸಂಬಂಧ ಇರಿಸಿಕೊಳ್ಳುವಂತೆ ಮಹಿಳೆ ಪೀಡಿಸುತ್ತಿದ್ದಳು. ಇದಕ್ಕೆ ಅಮಿತ್ ವರ್ಮಾ ನಿರಾಕರಿಸಿದ್ದಾರೆ. ಇದರಿಂದ ಕುಪಿತಗೊಂಡ ಮಹಿಳೆ ನಿನ್ನೆ ಬೆಳಗ್ಗೆ ಈ ಕೃತ್ಯ ನಡೆಸಿದ್ದಾಳೆ.

ನಿನ್ನೆ ಬೆಳಗ್ಗೆ ಅಮಿತ್ ವರ್ಮಾ ತಾವು ವಾಸಿಸುತ್ತಿದ್ದ ಮನೆಯ ರೂಂ ಒಂದರಲ್ಲಿ ನಾಯಿಗಳಿಗಾಗಿ ಕ್ಲಿನಿಕ್ ಇಟ್ಟುಕೊಂಡಿದ್ದರು. ಸೋಮವಾರ ಬೆಳಗ್ಗೆ 8 ಗಂಟೆಗೆ ಬಂದ ಮಹಿಳೆ ಅಮಿತ್ ವರ್ಮಾ ಮೇಲೆ ಆ್ಯಸಿಡ್ ದಾಳಿ ನಡೆಸಿದ್ದಾಳೆ ಎಂದು ಅಮಿತ್ ವರ್ಮಾ ಅವರ ರೂಮ್ ಮೇಟ್ ದೀಪಕ್ ಎಂಬಾತ ತಿಳಿಸಿದ್ದಾರೆ.

ಕೂಡಲೇ ಅವರನ್ನು ಕೌಶುಂಬಿಯ ಯಶೋದಾ ಆಸ್ಪತ್ರೆಗೆ ದಾಖಲಿಸಲಾಯಿತು. ಅಮಿತ್ ವರ್ಮಾ ಅವರು ಶೇ.40 ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಇನ್ನೂ ಅಮಿತ್ ವರ್ಮಾ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿಲ್ಲದ ಕಾರಣ ಪೊಲೀಸರಿ ಇನ್ನೂ ಪ್ರಕರಣ ದಾಖಲಿಸಿಕೊಂಡಿಲ್ಲ.

Write A Comment