ಅಂತರಾಷ್ಟ್ರೀಯ

ಇರಾನ್‍ನಲ್ಲಿ ಹಾಡಿ ಕುಣಿದದ್ದಕ್ಕೆ : 1 ವರ್ಷ ಜೈಲು, 91 ಛಡಿ ಏಟಿನ ಶಿಕ್ಷೆ

Pinterest LinkedIn Tumblr

Abdul_ajij_jail

ಟೆಹ್ರಾನ್, ಸೆ.20: ಅಮೆರಿಕದ ವರ್ಜೀನಿಯಾ ಮೂಲದ ಗಾಯಕ, ಸಂಗೀತ ನಿರ್ದೇಶಕ, ನೃತ್ಯಪಟು, ಧ್ವನಿಮುದ್ರಿಕೆಗಳ ನಿರ್ಮಾಪಕ, ಫ್ಯಾಷನ್ ಡಿಸೈನರ್ ಫರೇಲ್ ವಿಲಿಯಮ್ಸ್ ಆಲ್ಬಂ ಒಂದರಿಂದ ಸಂತಸಗೊಂಡು ತಮ್ಮ ಖಾಸಗಿ ನಿವಾಸದಲ್ಲಿ ನರ್ತಿಸಿದ 7 ಮಂದಿ ಇರಾನಿ ಪ್ರಜೆಗಳಿಗೆ ಷೆರೀಯತ್ ಗುಂಪು ತಲಾ ಒಂದು ವರ್ಷ ಸೆರೆಮನೆ ವಾಸ ಹಾಗೂ 91 ಛಡಿಏಟು ಶಿಕ್ಷೆ ವಿಧಿಸಿದೆ.

ಏಕೆಂದರೆ ಈ ಗುಂಪಿನ ಪ್ರಕಾರ ನರ್ತಿಸುವುದು ಮೈ ಕಾಣುವ ಬಟ್ಟೆ ಧರಿಸುವುದು ಮಹಾಪರಾಧ ! ದೇಶದಲ್ಲಿ ಯಾರು ನರ್ತಿಸದಂತೆ, ಸಿನಿಮಾ ನೋಡದಂತೆ ಮೈಕಾಣುವ ಉಡುಪು ತೊಡದಂತೆ ಮಹಿಳೆಯರ ಮೇಲೆ ನಿಗಾ ವಹಿಸಲು ಉಗ್ರರ ತಂಡಗಳು ಅಲ್ಲಲ್ಲಿ ಗಸ್ತು ತಿರುಗುತ್ತಿವೆ. ಈ ರೀತಿ ನರ್ತಿಸುವುದು ಷೆರೀಯತ್ ಕಾನೂನಿಗೆ ವಿರುದ್ಧ ಮತ್ತು ಕಟ್ಟುಕಟ್ಟಲೆಗಳ ಉಲ್ಲಂಘನೆ. ಹಾಗಾಗಿ ತಮ್ಮ ಖಾಸಗಿ ಕೋಣೆಯಲ್ಲಿ ನಾಲ್ವರು ಯುವತಿಯರು ಮೂವರು ಪುರುಷರೊಂದಿಗೆ ಫರೇಲ್ ವಿಲಿಯಮ್ಸ್ ಪರ ನರ್ತಿಸಿದ್ದರು.

ಇವರ ಈ ಹ್ಯಾಪಿ ಡ್ಯಾನ್ಸ್ ವೀಡಿಯೋ ಅಂತರ್ಜಾಲದಕ್ಕೆ ಅಪ್‍ಲೋಡ್ ಆಗಿತ್ತು. ಈ ವೀಡಿಯೋ ಚಿತ್ರಗಳನ್ನು ಲಕ್ಷಾಂತರ ಜನ ವೀಕ್ಷಿಸಿ ಸಂತಸ ಹಂಚಿಕೊಂಡಿದ್ದರು. ಇದರಿಂದ ವ್ಯಗ್ರರಾದ ಉಗ್ರರು ಈ ಏಳು ಮಂದಿಯನ್ನು ಹಿಡಿದು ಅವರಿಗೆ ತಲಾ ಒಂದು ವರ್ಷ ಜೈಲು ಹಾಗೂ 91 ಛಡಿ ಏಟಿನ ಶಿಕ್ಷೆ ವಿಧಿಸಿದ್ದಾರೆ. ಇದನ್ನು ವಿಶ್ವ ಸಮುದಾಯ ವ್ಯಾಪಕವಾಗಿ ಖಂಡಿಸಿದೆ.

Write A Comment