ಅಂತರಾಷ್ಟ್ರೀಯ

ಅಮೆರಿಕದ ಪ್ರಮುಖ ಪತ್ರಿಕೆಗೆ ಒಬಾಮಾ-ಮೋದಿ ಜಂಟಿ ಸಂಪಾದಕೀಯ

Pinterest LinkedIn Tumblr

modi-obama

ವಾಷಿಂಗ್ಟನ್, ಸೆ.30: ಇದೇ ಪ್ರಪ್ರಥಮ ಬಾರಿಗೆ ಭಾರತದ ಪ್ರಧಾನಿಯೊಬ್ಬರು, ಅಮೆರಿಕ ಅಧ್ಯಕ್ಷರೊಂದಿಗೆ ಇಲ್ಲಿನ ಪ್ರತಿಷ್ಠಿತ ಪತ್ರಿಕೆಗೆ ಜಂಟಿ ಸಂಪಾದಕೀಯ ಬರೆದು ಇತಿಹಾಸ ನಿರ್ಮಿಸಿದ್ದಾರೆ. ಇಬ್ಬರೂ ನಾಯಕರು ಅಮೆರಿಕದ ಪ್ರತಿಷ್ಠಿತ ಪತ್ರಿಕೆ ಎನಿಸಿರುವ `ವಾಲ್ ಸ್ಟ್ರೀಟ್ ಜರ್ನಲ್’ಗೆ ಸಂಪಾದಕೀಯವೊಂದನ್ನು ಜಂಟಿಯಾಗಿ ಬರೆದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬರಾಕ್ ಒಬಾಮಾ ಜತೆಗೂಡಿ ಈ ರೀತಿ ಪತ್ರಿಕೆಗೆ ಸಂಪಾದಕೀಯ ಬರೆದಿರುವುದು ಹೊಸ ಇತಿಹಾಸವೊಂದನ್ನು ನಿರ್ಮಾಣ ಮಾಡಿದಂತಾಗಿದೆ ಎಂದು ವಿದೇಶಾಂಗ ಖಾತೆ ವಕ್ತಾರ ಅಕ್ಬರುದ್ದೀನ್ ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅಕ್ಬರುದ್ದೀನ್, ಉಭಯ ನಾಯಕರಲ್ಲಿ ನಡೆದ ಸುಮಾರು 90 ನಿಮಿಷಗಳ ಮಾತುಕತೆಯ ನಂತರ ಈ ಸಂಪಾದಕೀಯ ಸಿದ್ಧಪಡಿಸಲಾಯಿತು ಎಂದು ಹೇಳಿದ್ದಾರೆ.
ಆದರೆ ಈ ಮಾತುಕತೆಗೆ ಯಾವ ರೀತಿ ವ್ಯವಸ್ಥೆ ಮಾಡಲಾಗಿತ್ತು ಎಂಬ ಬಗ್ಗೆ ಹೇಳಲು ಅವರು ನಿರಾಕರಿಸಿದ್ದಾರೆ.

ಈ ಸಂಪಾದಕೀಯದಲ್ಲಿ ನರೇಂದ್ರ ಮೋದಿ, ತಮ್ಮ `ಮೇಕ್ ಇನ್ ಇಂಡಿಯಾ3 ಅಭಿಯಾನಕ್ಕೆ ಸಾಥ್ ನೀಡುವಂತೆ ಕೈಗಾರಿಕೋದ್ಯಮಿಗಳಿಗೆ ವಿನಂತಿಸಿದ್ದಾರೆ. ಪ್ರಧಾನಿ ಮೋದಿ ಅವರು ಶ್ವೇತಭವನದ ದ್ವಾರದ ಬಳಿ ಬಂದಾಗ ಅಧ್ಯಕ್ಷ ಒಬಾಮಾ ಅವರು `ಕೆಮ್ ಚೊ ಮಿ ಪ್ರೈಮ್ ಮಿನಿಸ್ಟರ್ ಎಂದು ಸ್ವಾಗತಿಸಿದಾಗ ಮೋದಿಯವರು `ಥ್ಯಾಕ್ ಯು ಮಿ ಪ್ರೆಸಿಡೆಂಟ್ ಎಂದು ಪ್ರತಿಕ್ರಿಯಿಸಿದರು ಎಂದು ಅಕ್ಬರುದ್ದೀನ್ ತಿಳಿಸಿದರು. ಅಮೆರಿಕ ಮತ್ತು ಭಾರತ ದೇಶಗಳ ನಡುವಣ ಬಾಂಧವ್ಯಗಳು ಉತ್ತಮವಾಗಿದ್ದು, ಅದನ್ನು ಮತ್ತಷ್ಟು ವಿಸ್ತೃತವಾಗಿ, ಆಳವಾಗಿ, ಬಲಿಷ್ಠವಾಗಿ ರೂಪಿಸುವ ನಿಟ್ಟಿನಲ್ಲಿ ಎರಡೂ ದೇಶಗಳೂ ಸಾಗಲಿವೆ ಎಂಬ ಆಶಯ ಇಬ್ಬರೂ ನಾಯಕರಲ್ಲಿ ವ್ಯಕ್ತವಾಯಿತು.

ಇದೊಂದು ಔತಣ ಕೂಟದ ಭೇಟಿಯಾಗಿದ್ದು , ಪ್ರಧಾನಿ ಮೋದಿ ಅವರು ಬಿಸಿ ನೀರು ಹೊರತಾಗಿ ಮತ್ತೇನನ್ನೂ ಸೇವಿಸಲಿಲ್ಲ ಎಂದು ಅಕ್ಬರುದ್ದೀನ್ ವಿವರ ನೀಡಿದರು.

Write A Comment