ಅಂತರಾಷ್ಟ್ರೀಯ

ಬೀಮ್ ಮೆಸೆಂಜರ್‌ನಲ್ಲಿ ಗೊತ್ತಾಗುತ್ತೆ ನೀವು ಟೈಪ್ ಮಾಡೋ ವಿಷ್ಯ!

Pinterest LinkedIn Tumblr

beammessenger

ಟೊರಾಂಟೋ: ನಿಮ್ಮ ಗರ್ಲ್‌ಫ್ರೆಂಡ್ ಅಥವಾ ಬಾಯ್‌ಫ್ರೆಂಡ್ ಜತೆ ಚಾಟ್ ಮಾಡುತ್ತಿದ್ದರೆ ಅವರು ಏನು ಟೈಪ್ ಮಾಡ್ತಾ ಇದ್ದಾರೆ? ಟೈಪ್ ಮಾಡಿದ್ದನ್ನು ಅಳಿಸಿ ಮತ್ತೆ ಏನು ಟೈಪ್ ಮಾಡಿದರು? ಎಂಬುದೆಲ್ಲಾ ನಿಮಗೆ ಗೊತ್ತಾಗುವಂತಿದ್ದರೆ ಎಷ್ಟು ಒಳ್ಳೆಯದಿತ್ತಲ್ವಾ? ಎಂದು ಯೋಚಿಸುತ್ತಿದ್ದೀರಾ?

ಹಾಗಾದರೆ ನಿಮ್ಮ ಯೋಚನೆ ಈಗ ಕಾರ್ಯ ರೂಪಕ್ಕೆ ಬಂದಿದೆ. ಬೀಮ್ ಮೆಸೆಂಜರ್ ಎಂಬ ಆ್ಯಪ್‌ನಲ್ಲಿ ಈ ಸೌಲಭ್ಯ ಲಭ್ಯವಾಗಿದೆ. ಅಂದರೆ ನಿಮ್ಮ ಗೆಳೆಯರು ನಿಮಗೆ ಏನು ಮೆಸೇಜ್ ಕಳುಹಿಸುತ್ತಿದ್ದಾರೆ ಎಂಬುದನ್ನು ಅವರು ಮೆಸೇಜ್ ಟೈಪ್ ಮಾಡುವ ಹೊತ್ತಲ್ಲೇ ನಿಮಗೆ ಗೊತ್ತಾಗಿ ಬಿಡುತ್ತದೆ.

ಟೊರೆಂಟೋ ಮೂಲದ ಪ್ರೊಪಲ್ಸನ್ ಲ್ಯಾಬ್ ಈ ತಂತ್ರಜ್ಞಾನವನ್ನು ಅಭಿವೃದ್ಧಿ  ಪಡಿಸಿದ್ದು, ಇದು ಇನ್ನೊಬ್ಬರು ನಮಗೆ ಸಂದೇಶ ಕಳುಹಿಸುವಾಗ ಅವರು ಟೈಪ್ ಮಾಡುವ ವಿಷಯವನ್ನು ನಮಗೆ ತೋರಿಸುತ್ತದೆ.

ನೀವು ಈ ಆ್ಯಪ್‌ನ್ನು ಬಳಸುವಾಗ ಇದು ನೇರ ಮಾತುಕತೆ ಮಾಡುವ ಅನುಭವವನ್ನೇ ನಿಮಗೆ ನೀಡುತ್ತದೆ. ಸಂದೇಶ ಬರುವ ಮುನ್ನವೇ ನಿಮಗೆ ಎಲ್ಲವೂ ಗೊತ್ತಾಗಿ ಬಿಡುತ್ತದೆ ಎಂದು ಪ್ರೊಪಲ್ಸನ್ ಲ್ಯಾಬ್ ತಮ್ಮ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ. ಮೆಸೆಂಜರ್‌ನಲ್ಲಿ ನೀವು ಟೈಪ್ ಮಾಡಿದ ಪ್ರತಿಯೊಂದು ಅಕ್ಷರ, ಡಿಲೀಟ್ ಮಾಡಿದ ಅಕ್ಷರಗಳು ಎಲ್ಲವೂ ನಿಮಗೆ ಕಾಣುತ್ತದೆ ಎಂದು ವೆಬ್‌ಸೈಟ್‌ನಲ್ಲಿ ಹೇಳಲಾಗಿದೆ.

ಬೀಮ್ ಮೆಸೆಂಜರ್ ಆ್ಯಪ್‌ ಆ್ಯಂಡ್ರಾಯ್ಡ್ ಮೊಬೈಲ್‌ನಲ್ಲಿ ಲಭ್ಯ.

Write A Comment