ವಾಷಿಂಗ್ಟನ್(ಐಎಎನ್‌ಎಸ್): ಹವಾಯಿ ದ್ವೀಪದ ಓಹು ವಿನಲ್ಲಿ ಎರಡು ಸಾವಿರ ಅಡಿಗಳಷ್ಟು ತಳಭಾಗದಲ್ಲಿ ‘ದೆವ್ವದ ಹಡಗು’ ಇರುವುದನ್ನು ಸಂಶೋಧಕರು ಪತ್ತೆ ಹಚ್ಚಿದ್ದಾರೆ.
ಕಳೆದ ವರ್ಷ ನಡೆಸಿದ ಜಲಾಂತರ್ಗಾಮಿ ಕಾರ್ಯಾಚರಣೆ ವೇಳೆ ಡಿಕನ್‌ಸನ್ ಎಂಬ ಈ ಕೇಬಲ್ ಹಡಗಿನ ಕೆಲ ಅವಶೇಷಗಳು ಸುಸ್ಥಿತಿಯಲ್ಲಿ ಸಿಕ್ಕಿದ್ದವು.
‘ಸ್ಫೋಟಕ್ಕೊಳಗಾಗಿ ಈ ಹಡಗು ಛಿದ್ರಗೊಂಡು ಸಮುದ್ರದಲ್ಲಿ ಮುಳುಗಿತ್ತು. ಸಿಕ್ಕಿರುವ ಅವಶೇಷಗಳಲ್ಲಿ ಹಡಗಿನ ಕೆಲ ಭಾಗಗಳಿಗೆ ಕೊಂಚವೂ ಹಾನಿಯಾಗದಿರುವುದು ಅಚ್ಚರಿ ಮೂಡಿಸಿದೆ’ ಎಂದು ಹವಾಯಿ ಸಮುದ್ರದ ತಳಭಾಗ ಸಂಶೋಧನಾ ಪ್ರಯೋಗಾಲಯದ ಜಲಾಂತರ್ಗಾಮಿ ಪೈಲಟ್ ಟೆರ್ರಿ ಕೆರ್ಬಿ ತಿಳಿಸಿದ್ದಾರೆ.