ಅಂತರಾಷ್ಟ್ರೀಯ

ಮನೆ ಕೊಂಡರೆ, ಒಡತಿ ಉಚಿತ!

Pinterest LinkedIn Tumblr

pvec120315vid wife2

ಸ್ಲೆಮನ್ (ಜಾವಾ): ಯಾರಿ­ಗುಂಟು ಯಾರಿಗಿಲ್ಲ ! ಮಾರಾಟ­ಕ್ಕಿರುವ ಒಂದು ಅಂತಸ್ತಿನ ಮನೆ­ಯೊಂ­ದನ್ನು ಕೊಂಡು­­ಕೊಂಡರೆ, 40 ವರ್ಷದ ಸುಂದರ ಮನೆಯೊಡತಿ ಉಚಿತ!
–ಇಂತಹದ್ದೊಂದು ಜಾಹೀರಾತು ಇಂಡೊನೇಷ್ಯಾದ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿದೆ.
ಬ್ಯೂಟಿ ಸಲೂನ್‌­ವೊಂದನ್ನು ನಡೆಸುತ್ತಿರುವ ವಿನಾ ಲಿಯಾ ಎಂಬ ವಿಧವೆ­, ತಾವು ಮನೆ ಮುಂದೆ ನಿಂತಿ­ರುವ ಭಾವಚಿತ್ರದ ಸಹಿತ ಈ ಜಾಹೀ­ರಾತು ನೀಡಿದ್ದಾರೆ. ಇದು ದೇಶದ ಇಂಟರ್‌­­ನೆಟ್‌ ಬಳಕೆ­ದಾರರ ಗಮನ ಸೆಳೆದಿದೆ.
ಎರಡು ಮಕ್ಕಳ ತಾಯಿಯಾದ ಲಿಯಾ, ಜಾವಾ ದ್ವೀಪದ ಸ್ಲೆಮನ್‌ ಎಂಬಲ್ಲಿ 75 ಸಾವಿರ ಡಾಲರ್ (ಅಂದಾಜು ರೂ 46.50 ಲಕ್ಷ) ಮೌಲ್ಯದ ಮನೆ ಹೊಂದಿದ್ದಾರೆ. ಒಂದು ಅಂತಸ್ತಿನ ಈ ಮನೆಯಲ್ಲಿ ಎರಡು ಮಲಗುವ ಕೋಣೆ, ಎರಡು ಬಚ್ಚಲು ಮನೆ, ಕಾರು ನಿಲ್ಲಿಸಲು ಸಾಕಷ್ಟು ಜಾಗ, ಜತೆಗೆ ಮೀನಿನ ಕೊಳ ಇದೆ.
ಮನೆಯೊಡತಿಯನ್ನು ಮದುವೆ­ಯಾಗಬ­ಹುದು!: ಮನೆ­­ಯನ್ನು ಕೊಂಡು­ಕೊಳ್ಳಲು ಇಚ್ಛಿಸು­ವವ ಒಬ್ಬಂಟಿ ಪುರು­ಷರು ಮನೆಯೊಡತಿಯನ್ನು ಮದುವೆ­ಯಾ­ಗಬಹುದು ಎಂದು ಜಾಹೀರಾತಿ­ನಲ್ಲಿ ತಿಳಿಸಲಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ದೇಶದ ಜನಪ್ರಿಯ ಅಂತರ್ಜಾಲ ಬಳಕೆದಾರರ ವೇದಿಕೆ ‘ಕಾಸ್ಕಸ್‌’, ‘ಕುಶಲಮತಿಯಾಗಿ­ರುವ ಲಿಯಾ ಅವರು, ಮನೆ ಕೊಂಡು­ಕೊಳ್ಳುವವರು ತಮ್ಮನ್ನು ಮದುವೆ­ಯಾಗ­ಬಹುದು ಎಂದು ಹೇಳುವ ಮೂಲಕ, ಮುಂದೆಯೂ ಅವರೇ ಆ ಮನೆಯ ಒಡತಿ­ಯಾಗಿ ಉಳಿಯುವ ಆಲೋಚನೆ­ಯಲ್ಲಿದ್ದಾರೆ’ ಎಂದಿದೆ.
ಬೆನ್ನತ್ತಿ ಬಂದ ಪತ್ರಕರ್ತರು, ಪೊಲೀಸರು
ಮುಸ್ಲಿಮರ ಬಾಹುಳ್ಯ ಹೆಚ್ಚಾಗಿರುವ ಈ ದೇಶದಲ್ಲಿ ಇಂತಹ­ದ್ದೊಂದು ಜಾಹೀರಾತು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಈ ಮಧ್ಯೆ, ಪತ್ರಕರ್ತರು ಮತ್ತು ಪೊಲೀಸರು ಲಿಯಾ ಅವರ ಬೆನ್ನತ್ತಿದ್ದಾರೆ.
ಈ ಕುರಿತು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿ­ಸಿದ ಲಿಯಾ, ‘ನನ್ನ ಜಾಹೀರಾತು ಇಷ್ಟೊಂದು ಸುದ್ದಿಯಾಗಿ­ರು­ವುದು ಆಶ್ಚ­ರ್ಯ­­ವಾಗಿದೆ. ಪತ್ರಕರ್ತರು ಸಂದರ್ಶ­ನಕ್ಕಾಗಿ ನನ್ನನ್ನು ಹುಡುಕಿಕೊಂಡು ಬರುತ್ತಿ­ದ್ದಾರೆ’ ಎಂದಿದ್ದಾರೆ.
ಅಲ್ಲದೆ, ‘ಇದೊಂದು ಅನುಚಿತ ಜಾಹೀರಾತು ಎಂದು ಪರಿಗಣಿಸಿ ಮನೆಗೆ ಬಂದಿದ್ದ ಪೊಲೀಸರು, ನನಗೆ ಪ್ರಶ್ನೆಗಳ ಸುರಿಮಳೆ­ಗೈದರು. ಆದರೆ ಈ ಜಾಹೀರಾತು ನನ್ನ ಆಲೋಚನೆಯಲ್ಲ ಎಂದು ಅವರಿಗೆ ಹೇಳಿದೆ’ ಎಂದು ತಿಳಿಸಿದ್ದಾರೆ.
‘ಮನೆ ಮಾರಾಟ ಮಾಡುವ ಕುರಿತು ಆಸ್ತಿ ಮಾರಾಟ ಏಜೆಂಟ್ ಆಗಿರುವ ನನ್ನ ಸ್ನೇಹಿತ­ನಿಗೆ ತಿಳಿಸಿದೆ. ಜತೆಗೆ ಮನೆ ಕೊಂಡು­­­ಕೊಳ್ಳುವವರು ಒಬ್ಬಂಟಿಯಾ­ಗಿದ್ದು, ನನ್ನನ್ನು ಪತ್ನಿಯಾಗಿ ಸ್ವೀಕರಿಸಲು ತಯಾರಿದ್ದರೆ ಇನ್ನೂ ಒಳ್ಳೆಯದು ಎಂದಿದ್ದೆ. ಆದರೆ, ಈ ಕುರಿತು ಆತ ಅಂತರ್ಜಾಲ­ದಲ್ಲಿ ನೀಡಿರುವ ಜಾಹೀರಾತು ಇಷ್ಟೊಂದು ದೊಡ್ಡ ಸುದ್ದಿಯಾಗುತ್ತದೆ ಎಂದು ಅಂದುಕೊಂಡಿರಲಿಲ್ಲ’ ಎಂದಿದ್ದಾರೆ.

Write A Comment