ಡೆರ್ಬಿಶೈರ್: ಹಲವಾರು ವರ್ಷಗಳಿಂದ ತಂದೆ ತನ್ನ ಮೇಲೆ ನಿರಂತರವಾಗಿ ಅತ್ಯಾಚಾರವೆಸಗುತ್ತಿದ್ದರೂ ಇವತ್ತಿಗೂ ತಂದೆಯನ್ನು ತುಂಬಾ ಪ್ರೀತಿಸುತ್ತಿರುವುದಾಗಿ ಪುತ್ರಿಯೊಬ್ಬಳು ಹೇಳಿಕೆ ನೀಡಿ ಅಚ್ಚರಿ ಮತ್ತು ಆಘಾತ ಮೂಡಿಸಿದ್ದಾಳೆ.
ಆರೋಪಿ ತಂದೆ ಪುತ್ರಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿದ ಪರಿಣಾಮವಾಗಿ ಆಕೆ ಗರ್ಭಿಣಿಯಾದಾಗ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಪುತ್ರಿ 10 ವರ್ಷದವಳಾಗಿದ್ದಾಲೇ ಆಕೆಯ ಮೇಲೆ ಅತ್ಯಾಚಾರವೆಸಗಲು ಆರಂಭಿಸಿದ್ದ ಪಾಪಿ ತಂದೆ, ಇದೀಗ 15 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ನ್ಯಾಯಮೂರ್ತಿಗಳು, ಆರೋಪಿ ತಂದೆಗೆ 15 ವರ್ಷಗಳ ಕಾಲ ಶಿಕ್ಷೆ ವಿಧಿಸಿ ಜೈಲಿಗೆ ಕಳುಹಿಸುತ್ತಿರುವ ಸಂದರ್ಭದಲ್ಲಿ ಓಡೋಡಿ ಬಂದ ಪುತ್ರಿ ಐ ಲವ್ ಯೂ ಪಾಪಾ, ಐ ಮಿಸ್ ಯೂ ಎಂದು ಗೋಳಾಡಿರುವುದನ್ನು ಕಂಡ ನ್ಯಾಯಾಲಯದಲ್ಲಿ ಉಪಸ್ಥಿತರಿದ್ದವರಿಗೆ ದಿಗ್ಬ್ರಮೆ ಮೂಡಿಸಿತು.
ಆರೋಪಿ ತಂದೆ, ಪುತ್ರಿಯ ಮೇಲೆ ಅತ್ಯಾಚಾರವೆಸಗಿದ ನಂತರ ಮುಂದೆ ಈ ರೀತಿ ಮಾಡುವುದಿಲ್ಲ ಎಂದು ಭರವಸೆ ನೀಡುತ್ತಿದ್ದ. ಭರವಸೆಯನ್ನು ಹುಸಿಗೊಳಿಸಿ ಮತ್ತೆ ಮತ್ತೆ ಅತ್ಯಾಚಾರವೆಸಗುತ್ತಿದ್ದ. ಪುತ್ರಿ ಗರ್ಭಿಣಿಯಾಗುವವರೆಗೂ ಅತ್ಯಾಚಾರ ಮುಂದುವರಿಸಿದ್ದ. ತಂದೆಯ ಕೃತ್ಯವನ್ನು ಬಹಿರಂಗಪಡಿಸಿದಲ್ಲಿ ಆತನ ಮತ್ತು ತನ್ನ ಪ್ರೀತಿಗೆ ಅಡ್ಡಿಯಾಗಬಹುದು ಎನ್ನುವ ಆತಂಕದಿಂದ ಪುತ್ರಿ ತಂದೆಯ ಕೃತ್ಯವನ್ನು ಮುಚ್ಚಿಟ್ಟಿದ್ದಳು.
ಆದರೆ, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದಾಗ ಕೋರ್ಟ್ ಆತನಿಗೆ 15 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ತಂದೆ ಶಿಕ್ಷೆ ಕೊಡಬೇಡಿ ಎನ್ನುವ ಪುತ್ರಿಯ ಮನವಿಯನ್ನು ಕೋರ್ಟ್ ತಿರಸ್ಕರಿಸಿತು.