ಬೋಕೋ ಹರಾಮ್ ಉಗ್ರರು ಮಹಿಳೆಯರನ್ನು ಅಪಹರಿಸಿ ಅತ್ಯಾಚಾರ ನಡೆಸುತ್ತಿರುವ ವಿಷಯ ಹೊಸದೇನಲ್ಲ. ಆದರೆ ಈ ಅತ್ಯಾಚಾರ ಮಾಡುತ್ತಿರುವ ಕಾರಣದ ಹಿಂದಿನ ರಹಸ್ಯ ಇದೀಗ ಹೊರ ಬಿದ್ದಿದೆ.
ಹೌದು. ನೂರಾರು ಮಹಿಳೆಯರು ಮತ್ತು ಯುವತಿಯರನ್ನು ಅಪಹರಿಸಿರುವ ಉಗ್ರರು ಸಾಮೂಹಿಕ ಅತ್ಯಾಚಾರ ನಡೆಸಿರುವ ಘಟನೆ ನೈಜೀರಿಯಾದಲ್ಲಿ ನಿರಂತರವಾಗಿ ನಡೆಯುತ್ತಿದ್ದು ಬೋಕೋ ಹರಾಮ್ ಉಗ್ರರು ಸ್ಥಳೀಯವಾಗಿ ತಮ್ಮ ಜನಸಂಖ್ಯೆ ಹೆಚ್ಚಿಸಲು ಮಹಿಳೆಯರ ಮೇಲೆ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.
ಉಗ್ರರಿಂದ ಅತ್ಯಾಚಾರಕ್ಕೊಳಗಾದ ಮಹಿಳೆಯೊಬ್ಬಳು ಈ ಆಘಾತಕಾರಿ ಅಂಶ ಬಿಚ್ಚಿಟ್ಟಿದ್ದು ನೂರಾರು ಮಹಿಳೆಯರನ್ನು ಮನೆಯೊಂದರಲ್ಲಿ ಕೂಡಿ ಹಾಕಿದ 12ಕ್ಕೂ ಹೆಚ್ಚು ಜನರಿದ್ದ ಉಗ್ರರು ದಿನಕ್ಕೊಬ್ಬರಂತೆ ಪ್ರತಿಯೊಬ್ಬರ ಮೇಲೆ ಅತ್ಯಾಚಾರ ನಡೆಸಿದರು. ಅವರ ಗರ್ಭ ಧರಿಸುವಂತೆ ಮಾಡಿ ತಮ್ಮ ಸಂತತಿ ಹೆಚ್ಚಿಸಿಕೊಳ್ಳುವುದು ಅವರ ಉದ್ದೇಶವಾಗಿತ್ತು. ನನಗೀಗ 4 ತಿಂಗಳು ಬೋಕೋ ಹರಾಮ್ ಉಗ್ರನೊಬ್ಬ ಇದರ ತಂದೆ ಎಂದು ಕಣ್ಣೀರಿಟ್ಟಿದ್ದಾಳೆ.
ಅಷ್ಟೇ ಅಲ್ಲ, ಈ ಉಗ್ರರು ಮಹಿಳೆಯರ ಅಂದ ಚಂದವನ್ನು ನೋಡಿ ಅವರ ಮೇಲೆ ಅತ್ಯಾಚಾರ ನಡೆಸುತ್ತಾರೆ . ಈ ಸಮಯದಲ್ಲಿ ಯಾರ ಹಾಗೂ ಎಷ್ಟು ಮಂದಿಯಾದರೂ ಅತ್ಯಾಚಾರ ಮಾಡುತ್ತಾರೆ ಎಂದು ಅಲವತ್ತುಕೊಂಡಿದ್ದಾಳೆ.