ಅಂತರಾಷ್ಟ್ರೀಯ

ಸೆಲ್ಫೀ ಹುಚ್ಚಿಗೆ ಆಸ್ಪತ್ರೆ ಸೇರಿದ ಯುವತಿ !!

Pinterest LinkedIn Tumblr

5399n-SELFIE-large570

ಸ್ಮಾರ್ಟ್ ಫೋನ್ ಬಂದ ನಂತರ  ಸೆಲ್ಫೀ ಹುಚ್ಚು ಎಂಬುದು ಹೆಚ್ಚುತ್ತಿದ್ದು ಇದಕ್ಕೆ ಸಾಕ್ಷಿ ಎಂಬಂತೆ ರಷ್ಯಾದ ಯುವತಿಯೊಬ್ಬಳು ಸೆಲ್ಫೀ ತೆಗೆದುಕೊಳ್ಳುವ ಭರದಲ್ಲಿ ಪಿಸ್ತೂಲನ್ನು ತಲೆಗೆ ಗುರಿಯಿಟ್ಟು ಟ್ರಿಗರ್ ಒತ್ತಿ ಇದೀಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ.

ಹೌದು. 21 ವರ್ಷದ ಯುವತಿ ಕೆಲಸ ಮಾಡುವ ಕಚೇರಿಯಲ್ಲಿನ ಭದ್ರತಾ ಸಿಬ್ಬಂದಿ ತಮ್ಮ 9 ಎಂ.ಎಂ. ಪಿಸ್ತೂಲನ್ನು ತೆಗೆದಿಟ್ಟು ಹೊರಗೆ ಹೋಗಿದ್ದ. ಈ ಸಮಯದಲ್ಲಿ  ಸೆಲ್ಫೀ ಹುಚ್ಚಿದ್ದ ಈ ಯುವತಿಪಿಸ್ತೂಲಿನೊಂದಿಗೆ ಸೆಲ್ಫೀ ತೆಗೆದುಕೊಳ್ಳಲು ಪ್ರಯತ್ನಿಸಿದ್ದು, ಈ ಸಂದರ್ಭದಲ್ಲಿ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ ಪರಿಣಾಮ ಮಹಿಳೆಯ ತಲೆಗೆ  ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಅಲ್ಲದೇ ಪಿಸ್ತೂಲನ್ನು ಅಜಾಗರೂಕತೆಯಿಂದ ತೆಗೆದಿಟ್ಟ ಪರಿಣಾಮ ಪಿಸ್ತೂಲ್ ಮಾಲೀಕನಿಗೆ 6 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದ್ದು ಯುವತಿಯ ಸೆಲ್ಫೀ ಹುಚ್ಚಿಗೆ ಈತನೂ ಕೆಲಸ ಕಳೆದುಕೊಳ್ಳುವಂತಾಗಿದೆ.

Write A Comment