ಲಂಡನ್: ಬೆನ್ನುಹುರಿಯಿಂದ ಬೇರ್ಪಟ್ಟಿರುವ ರುಂಡವನ್ನು ಮರು ಜೋಡಿಸುವ ಅತ್ಯಂತ ಕಠಿಣ ಶಸ್ತ್ರಚಿಕಿತ್ಸೆಯನ್ನು ಭಾರತೀಯ ಮೂಲದ ಡಾಕ್ಟರ್ ಅನಂತ್ ಕಾಮತ್ ಅವರ ನೇತೃತ್ವದ ತಂಡ ಯಶಸ್ವಿಯಾಗಿ ನಡೆಸಿದೆ.
ಬ್ರಿಟನ್‌ನ ನ್ಯೂಕ್ಯಾಸಲ್ ನಗರದ ನಿವಾಸಿ ಟೋನಿ ಕೋವನ್ (29) ಕಳೆದ ವರ್ಷ ಸೆಪ್ಟಂಬರ್ 9ರಂದು ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ. ಅವರ ತಲೆ ಬೆನ್ನು ಮೂಳೆಯಿಂದ ಬೇರ್ಪಟ್ಟಿತ್ತು. ಕೆಲ ಸ್ನಾಯುಗಳ ಮೂಲಕವಷ್ಟೇ ಅವರ ರುಂಡ ದೇಹದ ಜತೆ ಸಂಪರ್ಕವನ್ನು ಹೊಂದಿತ್ತು. ಯಾವುದೇ ಕ್ಷಣದಲ್ಲಿ ಪ್ರಾಣ ಹೋಗುವುದು ಎಂಬ ಸ್ಥಿತಿಯಲ್ಲಿ ಅವರಿದ್ದರು. ಆತ ಬದುಕುವುದು ಸಾಧ್ಯವಿಲ್ಲ ಎಂದು ವೈದ್ಯರು ಘೋಷಿಸಿದ್ದರು.
ಮೆದುಳು ಕಾರ್ಯನಿರ್ವಹಿಸುವುದನ್ನು ಸ್ಥಗಿತಗೊಳಿಸಿದೆ ಎಂದು ಸ್ಕಾನ್ ವರದಿ ತಿಳಿಸಿತ್ತು. ಅವರಿಗೆ ಅಳವಡಿಸಲಾಗಿದ್ದ ಜೀವರಕ್ಷಕ ಸಾಧನಗಳನ್ನು ಸ್ಥಗಿತಗೊಳಿಸಬೇಕು ಎಂದುಕೊಂಡಾದ ಅವರು ಕಣ್ಣು ಪಿಳುಗುಡಿಸಿದ್ದು ವೈದ್ಯರಿಗೆ ಆತನನ್ನು ಬದುಕಿಸುವ ಗುರಿಯನ್ನು ಹುಟ್ಟಿಸಿತು.
ನ್ಯೂರೊ ಸರ್ಜನ್ ಅನಂತ್ ಕಾಮತ್ ನೇತೃತ್ವದಲ್ಲಿ ಮೆಟಲ್ ಪ್ಲೇಟ್ ಮತ್ತು ಬೋಲ್ಟ್‌ಗಳಿಂದ ಕೋವನ್‌ನ ತಲೆ ಮತ್ತು ಮೆದುಳನ್ನು ಜೋಡಿಸಲಾಯಿತು. ಅತ್ಯಂತ ಸಂಕೀರ್ಣವಾದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದ್ದು, ಇದೇ ಮೊದಲ ಬಾರಿ ಇಂತಹ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿಗೆ ಪಾತ್ರವಾಗಿದೆ ಭಾರತ ಮೂಲದ ಕಾಮತ್ ನೇತೃತ್ವದ ತಂಡ.
ಕೋವನ್ ಈಗ ಮುಗುಳ್ನಗುತ್ತಿದ್ದಾನೆ ಮತ್ತು ತನ್ನವರನ್ನು ಗುರುತಿಸುತ್ತಿದ್ದಾನೆ.