ಅಂತರಾಷ್ಟ್ರೀಯ

ಅಮೆರಿಕ ಹಿಂದೆ ಸರಿಯದಿದ್ದಲ್ಲಿ ಯುದ್ಧ ಅನಿವಾರ್ಯ: ಚೀನಾ

Pinterest LinkedIn Tumblr

China

ಬೀಜಿಂಗ್, ಮೇ 25: ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ನಿರ್ಮಾಣ ಯೋಜನೆಗಳನ್ನು ಬೀಜಿಂಗ್ ಸ್ಥಗಿತಗೊಳಿಸಬೇಕು ಎಂಬ ಬೇಡಿಕೆಯನ್ನು ಅಮೆರಿಕ ನಿಲ್ಲಿಸದಿದ್ದಲ್ಲಿ ಅಮೆರಿಕ ಹಾಗೂ ಚೀನಾ ನಡುವೆ ಯುದ್ಧ ಅನಿವಾರ್ಯವಾಗಬಹುದು ಎಂದು ಚೀನಾದ ಸರಕಾರಿ ಸ್ವಾಮ್ಯದ ಸುದ್ದಿಪತ್ರಿಕೆ ಎಚ್ಚರಿಸಿದೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಬೀಜಿಂಗ್ ‘ಭೂಸುಧಾರಣಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ಆರೋಪಿಸಿರುವ ವಾಷಿಂಗ್ಟನ್, ಚೀನಾವು ತನ್ನದೆಂದು ಹೇಳಿಕೊಳ್ಳುತ್ತಿರುವ ಮಾನವ ನಿರ್ಮಿತ ದ್ವೀಪಗಳು ಪ್ರಾದೇಶಿಕ ಸೇನಾ ನಿಯೋಜನೆಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಭಿಪ್ರಾಯಿಸಿದೆ.

‘‘ಚೀನಾವು ಈ ಪ್ರದೇಶದಲ್ಲಿ ತನ್ನ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಬೇಕೆಂಬುದೇ ಅಮೆರಿಕದ ಕೊನೆಯ ಮಾತಾಗಿದ್ದಲ್ಲಿ, ಆಗ ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಅಮೆರಿಕ-ಚೀನಾ ಯುದ್ಧ ಅನಿವಾರ್ಯ’’ ಎಂದು ಆಡಳಿತಾರೂಢ ಕಮ್ಯೂನಿಸ್ಟ್ ಪಾರ್ಟಿಯ ಅಕೃತ ಸುದ್ದಿಪತ್ರಿಕೆ ‘ದ ಪೀಪಲ್ಸ್ ಡೈಲಿ’ ಮಾಲಕತ್ವದ ‘ದ ಗ್ಲೋಬಲ್ ಟೈಮ್ಸ್’ ಸೋಮವಾರ ತನ್ನ ಸಂಪಾದಕೀಯದಲ್ಲಿ ಹೇಳಿದೆ.
ಬಿಕ್ಕಟ್ಟಿನ ತೀವ್ರತೆಯ ಜನರು ಸಾಮಾನ್ಯವಾಗಿ ಭಾವಿಸಿರುವ ‘ಘರ್ಷಣೆ’ಗಿಂತ ತೀರಾ ಅಕವಾಗಲಿದೆ ಎಂದು ಅದು ಎಚ್ಚರಿಸಿದೆ.
ಅಮೆರಿಕದ ಕಣ್ಗಾವಲು ವಿಮಾನಗಳು ತನ್ನ ದ್ವೀಪಗಳು ಹಾಗೂ ಭೂಪ್ರದೇಶಗಳ ಮೇಲೆ ಹಾರಾಡುವುದು ಪ್ರಾದೇಶಿಕ ಶಾಂತಿಗೆ ಒಂದು ಬೆದರಿಕೆಯಾಗಿ ಪರಿಣಮಿಸಲಿದೆ ಮತ್ತು ಇದರಿಂದ ತಪ್ಪು ಗ್ರಹಿಕೆ ಉಂಟಾಗಿ ನೌಕಾ ಅಥವಾ ವೈಮಾನಿಕ ದುರಂತಗಳು ಸಂಭವಿಸುವ ಸಾಧ್ಯತೆ ಅಕವಾಗಿದೆ ಎಂದು ಇದೇ ವೇಳೆ ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.

Write A Comment