ಅಂತರಾಷ್ಟ್ರೀಯ

ಆತ್ಮಾಹುತಿ ಬಾಂಬ್‌ಗೆ 6 ಸೈನಿಕರು ಬಲಿ, 8 ಮಂದಿಗೆ ಗಾಯ

Pinterest LinkedIn Tumblr

Peshwar-Bomb-Attack

ಪೇಶಾವರ, ಜೂ.12-ಮೋಟಾರ್ ಬೈಕ್ ಮೇಲೆ ಬಂದ ಆತ್ಮಾಹುತಿ ದಾಳಿಕೋರ ಬಾಂಬರ್ ಒಬ್ಬ ಸೇನಾಪಡೆಯ ವಾಹನಕ್ಕೆ ಡಿಕ್ಕಿ ಹೊಡೆದದ್ದರಿಂದ 6 ಮಂದಿ ಜವಾನರು ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ಇತರ ಇಬ್ಬರು ಪೊಲೀಸ್ ಅಧಿಕಾರಿಗಳು ಸೇರಿದಂತೆ 8 ಜನ ಗಂಭೀರವಾಗಿ ಗಾಯಗೊಂಡಿದ್ದಾರೆ.

ಮೃತರಲ್ಲಿ ಇಬ್ಬರು ಪೊಲೀಸ್ ಜವಾನರಾದ ಇಬ್ರಾರ್ ಹುಸೈನ್ ಮತ್ತು ಲಾಲ್‌ಬಹದ್ದೂರ್ ಸೇರಿದ್ದಾರೆ. ಸೇನಾಪಡೆ ವಾಹನ ಪೇಶಾವರದ ಕ್ವಿಟ್ಟಾದಲ್ಲಿನ ಹಯಾತಾಬಾದ್ ಮೆಡಿಕಲ್ ಕಾಂಪ್ಲೆಕ್ಸ್ ಬಳಿ ಬಂದಾಗ ಆತ್ಮಾಹುತಿ ಬಾಂಬರ್ ಈ ಕೃತ್ಯ ಎಸಗಿದ್ದಾನೆ. ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ವಕ್ತಾರರೊಬ್ಬರು ತಿಳಿಸಿದ್ದಾರೆ.

Write A Comment