ಲಾಸ್‌ಏಂಜೆಲ್ಸ್ , ಜೂ.13: ದ್ವಿತೀಯ ಮಹಾಯುದ್ಧದಲ್ಲಿ ಜಪಾನ್ ಮೇಲೆ ಬಾಂಬ್ ದಾಳಿ ನಡೆದ ಸಂದರ್ಭ 1945ರಲ್ಲಿ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್, ತಮ್ಮ ಸಾಪೇಕ್ಷ ಸಿದ್ದಾಂತ(ಥಿಯರಿ ಆಫ್ ರಿಲೇಟಿವಿಟಿ) ಮತ್ತು ಅಣುಬಾಂಬ್(ಆಟೋಮಿಕ್ ಬಾಂಬ್) ನಡುವಿನ ಪರಸ್ಪರ ಸಂಬಂಧವನ್ನು ಕುರಿತು ಅವರ ಪುತ್ರನೊಬ್ಬನಿಗೆ ಬರೆದಿದ್ದ ಪತ್ರವೊಂದು 62,500 ಡಾಲರ್‌ಗಳಿಗೆ(3.15 ಕೋಟಿ ರೂ.) ಹರಾಜಾಗಿದೆ.
ಐನ್‌ಸ್ಟೀನರ ಒಟ್ಟು 27 ಪತ್ರಗಳಲ್ಲಿ ಇದೂ ಒಂದಾಗಿದೆ. ಈ ಪತ್ರ ಗುರುವಾರ ಹರಾಜಿಗೆ ಬಂದಿತ್ತು. ಒಟ್ಟಾರೆ ಐನ್‌ಸ್ಟೀನ್ ಪತ್ರಗಳ ಹರಾಜಿನಿಂದ 420 ಸಾವಿರ ಡಾಲರ್ ಬಂದಿದೆ ಎಂದು ಮೂಲಗಳು ತಿಳಿಸಿವೆ. ಎರಡು ಪತ್ರಗಳು 1940ರ ದಶಕದಲ್ಲಿ ಬರೆದವು. ಈ ಪತ್ರಗಳು ದೇವರ ಬಗ್ಗೆ ಯಾರೋ ಒಬ್ಬರು ಕೇಳಿದ್ದ ಪ್ರಶ್ನೆಗೆ ಐನ್‌ಸ್ಟೀನ್ ಕೊಟ್ಟಿದ್ದ ವಿವರದ ಉತ್ತರಗಳು.
ಆ ಎರಡೂ ಪತ್ರಗಳೂ ಕ್ರಮವಾಗಿ 28,125 ಮತ್ತು 34,375 ಅಮೆರಿಕ ಡಾಲರ್‌ಗಳಿಗೆ ಮಾರಾಟವಾಗಿದ್ದವು. ಉಳಿದವು ಮೆಕಾರ್ತಿಯಿಸಂ, ನಾಜಿಸಂ ಮತ್ತು ವೈಯಕ್ತಿಕ ಆಲೋಚನೆಗಳನ್ನು ಗಳನ್ನು ಕುರಿತಾದವು ಕಳೆದ ಹಲವು ದಶಕಗಳಿಂದಲೂ ಈ ಪತ್ರಗಳನ್ನು ಮಾರಾಟಕ್ಕಾಗಿ, ಸಮಾಜಕ್ಕೆ ಪರಿಚಯಿಸಿಕೊಳ್ಳಲಿಚ್ಚಿಸದ ವ್ಯಕ್ತಿಯೊಬ್ಬ ಸಂಗ್ರಹಿಸಿದ್ದ. ಈಗ ಅವನಿಂದ ಬೇರೆ ಬೇರೆ ವ್ಯಕ್ತಿಗಳು ಅವುಗಳನ್ನು ಖರೀದಿಸಿದ್ದಾರೆ ಎಂದು ಪ್ರೊಫೈಲ್ಸ್ ಇನ್ ಹಿಸ್ಟರಿ ಸಂಸ್ಥಾಪಕ ಜೋಸೆಫ್ ಮದ್ದಲೆನಾ ತಿಳಿಸಿದ್ದಾರೆ.