ನ್ಯೂಯಾರ್ಕ್ (ಪಿಟಿಐ): ಇಲ್ಲಿನ ರಿಟ್ಜಿ ರೆಸ್ಟೊರೆಂಟ್ ಚಿನ್ನದಲ್ಲಿ ಅದ್ದಿರುವ 214 ಡಾಲರ್ (₨13,696) ಬೆಲೆಯ ಸ್ಯಾಂಡ್‌ವಿಚ್‌ನ್ನು ತಯಾರಿಸಲಾಗಿದೆ. ಈ ಮೂಲಕ ಇದು ವಿಶ್ವದ ಮೊದಲ ಅತಿ ದುಬಾರಿ ಸ್ಯಾಂಡ್‌ವಿಚ್ ಎಂದು ಗಿನ್ನೆಸ್ ದಾಖಲೆಗೆ ಸೇರ್ಪಡೆಯಾಗಿದೆ.
ಚೀಸ್ ಮೇಲೆ ಚಿನ್ನ ಲೇಪಿತವಾಗಿರುವ ಈ ಸ್ಯಾಂಡ್‌ವಿಚ್‌ನ್ನು ನ್ಯೂಯಾರ್ಕ್ ನ ವಿಶಿಷ್ಟ ಶೈಲಿಯಲ್ಲಿಯೇ ತಯಾರಿಸಲಾಗಿದೆ. ಈ ಸ್ಯಾಂಡ್‌ವಿಚ್ ಬೇಕಾಗಿರುವವರು ಎರಡು ದಿನ ಮೊದಲೇ ಆರ್ಡರ್ ಮಾಡಬೇಕು.
‘ಇದು ವಿಶ್ವದ ಮೊದಲ ಅತಿ ದುಬಾರಿ ಸ್ಯಾಂಡ್‌ವಿಚ್. ರಾಷ್ಟ್ರೀಯ ಸ್ಯಾಂಡ್‌ವಿಚ್ ದಿನಕ್ಕಾಗಿ ಈ ದುಬಾರಿ ಸ್ಯಾಂಡ್‌ವಿಚ್‌ನ್ನು ಸಿದ್ಧಪಡಿಸಿದೆವು’ ಎಂದು ಮುಖ್ಯ ಬಾಣಸಿಗ ಜೋ ಕಾಲ್ಡೆರೊನಿ ತಿಳಿಸಿದ್ದಾರೆ.
ಈ ಸ್ಯಾಂಡ್‌ವಿಚ್‌ಗೆ ಅಂತಿಮವಾಗಿ ಟೊಮೆಟೊ ಹಾಗೂ ಏಡಿಯ ಖಾದ್ಯ ಲೇಪಿಸಿ ಸ್ಫಟಿಕದ ಬಟ್ಟಲಿನಲ್ಲಿ ಬಡಿಸಲಾಗುತ್ತದೆ. ಮುಖ್ಯ ಬಾಣಸಿಗರು ಈ ಸ್ಯಾಂಡ್‌ವಿಚ್‌ಗೆ 23 ಕ್ಯಾರೆಟ್ ಚಿನ್ನದ ಲೇಪನ ಮಾಡುತ್ತಾರೆ.
ಮರ್ಲಿನ್ ಮನ್ರೊ , ಬೆಯೋನ್ಸೆ ಹಾಗೂ ಜೇ ಝೆಡ್ ಸೇರಿದಂತೆ ಅನೇಕ ಗಣ್ಯರು ಭೇಟಿ ನೀಡಿರುವ ಹಿರಿಮೆ ಈ ರೆಸ್ಟೊರೆಂಟ್‌ಗೆ ಇದೆ.