ಬೀಜಿಂಗ್: ಚೀನದಲ್ಲಿರುವವರು ಮನುಷ್ಯರೋ ಅಥವಾ ಪ್ರಾಣಿಗಳೋ. ಇವರ ಆಹಾರವೇ ವಿಚಿತ್ರ ಕಣ್ರೀ ….ಜೊತೆಗೆ ಕೆಲವೊಮ್ಮೆ ಅಸಹ್ಯ ಹುಟ್ಟಿಸುವುದು ಹೊಸದೆನಲ್ಲ. ಆದರೆ ಈಗ ಆಹಾರದ ಬಗ್ಗೆ ಹೇಳಿದರೆ ನಿಜಕ್ಕೂ ನಿಮಗೆ ವಾಕರಿಕೆ ಬರಬಹುದು.
ಹೌದು. ಚೀನಾದಲ್ಲಿ ವರ್ಜಿನ್ ಹುಡುಗರ ಮೂತ್ರಕ್ಕೆ ಈಗ ಸಿಕ್ಕಾಪಟ್ಟೆ ಬೇಡಿಕೆ ಇದೆ. ಚೀನಾದಲ್ಲಿ ವರ್ಜಿನ್ ಹುಡುಗರ ಮೂತ್ರ ವೇಸ್ಟ್ ಆಗುದಿಲ್ವಂತೆ. ಯಾಕಂದ್ರೆ ಅಲ್ಲಿ ಮೊಟ್ಟೆಯನ್ನು ಈ ಮೂತ್ರದಿಂದ ಬೇಯಿಸಲಾಗುತ್ತದೆ. ಹೀಗಾಗಿ ಇಲ್ಲಿನ ಪ್ರೈಮರಿ ಸ್ಕೂಲ್‍ಗಳಿಂದ ಬಕೆಟ್, ಬಕೆಟ್ ಯೂರಿನ್‍ಗಳನ್ನು ಹಲವು ಕಡೆ ಸರಬರಾಜು ಮಾಡಲಾಗುತ್ತಿದೆ.
ಮೂತ್ರದಿಂದ ಬೇಯಿಸಿದ ಮೊಟ್ಟೆಯನ್ನು ತಿಂದರೆ ದೇಹದಲ್ಲಿರೋ ಉಷ್ಣಾಂಶ ಕಡಿಮೆಯಾಗುವುದಲ್ಲದೇ ರಕ್ತದ ಹರಿವು ಚೆನ್ನಾಗಿ ಆಗುತ್ತದೆಯಂತೆ. ಅಲ್ಲದೇ ದೇಹವನ್ನು ಪುನಶ್ಚೇತನಗೊಳಿಸುವ ಶಕ್ತಿಯೂ ಈ ಮೊಟ್ಟೆಗಿರುತ್ತದೆ. ಅಷ್ಟೇ ಅಲ್ಲದೇ ಈ ಮೊಟ್ಟೆ ಟೇಸ್ಟ್ ಉಪ್ಪು ಉಪ್ಪಾಗಿದ್ದರೂ ತಿಂದರೆ ದಿನವಿಡೀ ಫ್ರೆಶ್ ಆಗಿರುವಂತೆ ಮಾಡುತ್ತದೆಯಂತೆ. ಹೀಗಾಗಿ ಪ್ರೈಮರಿ ಸ್ಕೂಲ್ ಹುಡುಗರ ಮೂತ್ರಕ್ಕೆ ಅಲ್ಲಿ ಬೇಡಿಕೆ ಜಾಸ್ತಿಯಿದೆ.
ಆದರೆ ಈ ರೀತಿ ಮೊಟ್ಟೆ ಬೇಯಿಸುವ ಪ್ರಕ್ರಿಯೆಗೆ ಇಡೀ ದಿನವೇ ಬೇಕಾಗುತ್ತದೆ. ಮೊದಲಿಗೆ ಮೊಟ್ಟೆಯನ್ನು ತಂದಿರುವ ಮೂತ್ರದಲ್ಲಿ ನಿಧಾನಕ್ಕೆ ಬೇಯಿಸಲಾಗುತ್ತದೆ. ಹೀಗೆ ಮೊಟ್ಟೆಯನ್ನ ಹಲವು ಗಂಟೆಗಳ ಕಾಲ ನಿಧಾನಕ್ಕೆ ಬೇಯಿಸಿದ ಬಳಿಕ, ಸ್ವಲ್ಪ ಸ್ವಲ್ಪವೇ ಮೂತ್ರವನ್ನ ಮತ್ತೆ ಅದೇ ಪಾತ್ರೆಗೆ ಹಾಕಿ ಕುದಿಸಲಾಗುತ್ತದೆ. ಹೀಗೆ ಕುದಿಸಿದ ಮೊಟ್ಟೆಗೆ ಚೀನಾದಲ್ಲಿ ಸಖತ್ ಬೇಡಿಕೆ ಇದೆ. ಸಾಮಾನ್ಯ ಬೇಯಿಸಿದ ಮೊಟ್ಟೆಗಿಂತ ಎರಡು ಪಟ್ಟು ಹೆಚ್ಚು ಬೆಲೆಯಲ್ಲಿ ಈ ಮೊಟ್ಟೆ ಮಾರಾಟವಾಗುತ್ತದೆ.