ಅಂತರಾಷ್ಟ್ರೀಯ

ಫೇಸ್‌ಬುಕ್ ಲೋಗೋ ಬದಲಾಗಿದ್ದು ಗಮನಿಸಿದ್ದೀರಾ?

Pinterest LinkedIn Tumblr

facebook-new-logoಫೇಸ್‌ಬುಕ್‌ನಲ್ಲಿ ಹೆಚ್ಚು ಸಕ್ರಿಯವಾಗಿದ್ದವರಾಗಿದ್ದರೂ ಇವತ್ತು ಫೇಸ್‌ಬುಕ್ ಲೋಗೋ ಬದಲಾಗಿದ್ದು ಗಮನಿಸಿದ್ದಾರಾ? 10 ವರ್ಷಗಳ ನಂತರ ಫೇಸ್‌ಬುಕ್ ತಮನ್ಮ ಲೋಗೋದಲ್ಲಿ ಪುಟ್ಟದೊಂದು ಬದಲಾವಣೆಯನ್ನು ಮಾಡಿದೆ. 2005ರಲ್ಲಿ ಫೇಸ್‌ಬುಕ್ ಲೋಗೋ ತಯಾರಿಸಿದಾಗ ಅದಕ್ಕೆ ಪಕ್ಕಾ ಪ್ರೊಫೆಷನಲ್ ಲುಕ್ ನೀಡಲಾಗಿತ್ತು. ಈಗ ಎಲ್ಲ ಸಾಮಾಜಿಕ ತಾಣಗಳಿಗಿಂತ ಹೆಚ್ಚು ಪ್ರಸಿದ್ಧಿ ಪಡೆದಿರುವ ಫೇಸ್‌ಬುಕ್ ಪ್ರೊಫೆಷನಲ್ ಲುಕ್ ಬಿಟ್ಟು ಫ್ರೆಂಡ್ಲೀ ಲುಕ್‌ಗೆ ಬದಲಾಗಿದೆ.

ಹಾಗಂತ ಲೋಗೋವನ್ನು ಸಂಪೂರ್ಣವಾಗಿ ಬದಲಾವಣೆಗೊಳಪಡಿಸಿಲ್ಲ. ಆದುದರಿಂದಲೇ ತಕ್ಷಣ ನೋಡಿದ ಕೂಡಲೇ ಈ ಬದಲಾವಣೆ ಗಮನಕ್ಕೆ ಬರುವುದಿಲ್ಲ. ಫೇಸ್‌ಬುಕ್‌ನಲ್ಲಿ ಎಫ್ ಎಂಬ ಅಕ್ಷರಕ್ಕೆ ಯಾವುದೇ ಬದಲಾವಣೆ ಮಾಡಿಲ್ಲ, ಆದರೆ a ಮತ್ತು e, b,o,o ಈ ಅಕ್ಷರಗಳಲ್ಲಿ ತುಸು ಬದಲಾವಣೆಯನ್ನು ಕಾಣಬಹುದಾಗಿದೆ. ಈ ಎಲ್ಲ ಅಕ್ಷರಗಳು ತುಸು ದಪ್ಪವಾಗಿ ಬರೆಯಲಾಗಿದ್ದು, ಎಲ್ಲವೂ ಗುಂಡು ಗುಂಡಾಗಿವೆ.

ವಿಶೇಷವೇನೆಂದರೆ ಹೊಸ ಲೋಗೋವನ್ನು ಫೇಸ್‌ಬುಕ್ ಗುರುವಾರ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿತ್ತು.

Write A Comment