ಟೋಕಿಯೋ: ಜಪಾನಿನ ಶಾಲಾ ಪ್ರಾಂಶುಪಾಲನೊಬ್ಬ 12,000 ಮಹಿಳೆಯರೊಂದಿಗೆ ಸಂಬಂಧ ಬೆಳೆಸಿದ್ದು, ಇದನ್ನು ನೆನಪಾಗಿ ಉಳಿಸಿಕೊಳ್ಳುವ ಸಲುವಾಗಿ 400 ಆಲ್ಬಂಗಳಲ್ಲಿ ಒಟ್ಟು 1,50,000 ಚಿತ್ರಗಳನ್ನು ಸಂಗ್ರಹಿಸಿಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.
ಯೂಯಿ ತಕಾಶಿಮಾ ಎಂಬ 64 ವರ್ಷದ ಪ್ರಾಂಶುಪಾಲನನ್ನು ಅಪ್ರಾಪ್ತೆಯೊಂದಿಗೆ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ಬಂಧಿಸಿದ ವೇಳೆ ಈತನ ಬಂಡವಾಳ ಬಯಲಿಗೆ ಬಂದಿದೆ. 1998 ರಲ್ಲಿ ಮನಿಲಾದ ಜಪಾನಿ ಶಾಲೆಯೊಂದಕ್ಕೆ ನಿಯೋಜಿಸಿದಾಗಿನಿಂದ ಇಲ್ಲಿಯವರೆಗೆ ಈತ ಒಟ್ಟು 12,000 ಮಹಿಳೆಯರೊಂದಿಗೆ ಸಂಬಂಧ ಬೆಳೆಸಿದ್ದನೆನ್ನಲಾಗಿದೆ.
ಅಪ್ರಾಪ್ತೆಯೊಂದಿಗೆ ಸಂಪರ್ಕ ಬೆಳೆಸಿದ್ದ ಈತ ನೆನಪಿಗಾಗಿ ಚಿತ್ರ ತೆಗೆದುಕೊಂಡಿದ್ದು, ಅಪ್ರಾಪ್ತೆಯನ್ನು ತನ್ನ ವಿಕೃತ ಕಾಮನೆಗೆ ಬಳಸಿಕೊಂಡಿದ್ದಕ್ಕಾಗಿ ಪೊಲೀಸರು ಈತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ತನ್ನ ಕೃತ್ಯದ ಬಗ್ಗೆ ಹೆಮ್ಮೆಯಿಂದ ಹೇಳಿಕೊಂಡಿರುವ ಈ ಭಂಡ ಪ್ರಾಂಶುಪಾಲ ಅವಕಾಶ ಸಿಕ್ಕರೆ ಮುಂದೆಯೂ ತನ್ನ ದಾಖಲೆಯನ್ನು ಮುಂದುವರೆಸುವುದಾಗಿ ಹೇಳಿದ್ದಾನೆ.