ಅಂತರಾಷ್ಟ್ರೀಯ

ವಿಮಾನವನ್ನೇ ಓವರ್ ಟೇಕ್ ಮಾಡಿದ ಹಾರುವ ತಟ್ಟೆ !

Pinterest LinkedIn Tumblr

planeಇತ್ತೀಚೆಗೆ ಹಾರುವ ತಟ್ಟೆಗಳ ಕುರಿತಾದ ಹಲವು ಸುದ್ದಿಗಳ ಕುರಿತು ಕೇಳಿದ್ದೀರಿ. ಆದರೆ ಇಲ್ಲೊಂದು ಕಡೆಯಲ್ಲಿ ಹಾರುವ ತತ್ತೆಯೊಂದು ವಿಮಾನವನ್ನೇ ಓವರ್ ಟೇಕ್ ಮಾಡುವ ಮೂಲಕ ಅಚ್ಚರಿಗೆ ಕಾರಣವಾಗಿದೆ.

ಹೌದು. ನ್ಯೂಯಾರ್ಕ್ ಜಾನ್ ಎಫ್ ಕೆನಡಿ ವಿಮಾನ ನಿಲ್ದಾಣದಿಂದ ವರ್ಜಿನ್ ಅಟ್ಲಾಂಟಿಕ್ ವಿಮಾನ ಪ್ರಯಾಣ ಪ್ರಾರಂಭಿಸಿತ್ತು. ಈ ಸಮಯದಲ್ಲಿ ಹಾರುವ ತಟ್ಟೆಯೊಂದು ವಿಮಾನವನ್ನು ಓವರ್ ಟೇಕ್ ಮಾಡಿದೆ. ಈ ದೃಶ್ಯಾವಳಿಯನ್ನು  ಪ್ರಯಾಣಿಕನೊಬ್ಬ ಸೆರೆ ಹಿಡಿದು ಅಂತರ್ಜಾಲದಲ್ಲಿ ಹರಿ ಬಿಟ್ಟಿದ್ದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಹಲವರು ಇದು ಸತ್ಯಕ್ಕೆ ದೂರವಾದುದು ಎಂದು ಕಾಮೆಂಟ್ ಮಾಡಿದರೆ ಇನ್ನೂ ಹಲವರು ಇದು ಪಕ್ಷಿಯೋ ಅಥವಾ ಮಿಲಿಟರಿ ವಿಮಾನವೋ ಇರಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Write A Comment