ಅಂತರಾಷ್ಟ್ರೀಯ

ಯುಕೆ ಮಾಜಿ ಪ್ರಧಾನಿ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ

Pinterest LinkedIn Tumblr

heathಲಂಡನ್: ’12 ವರ್ಷದವನಿರುವಾಗ ಸರ್ ಎಡ್ವರ್ಡ್ ಹೀತ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು,’ ಎಂದು ವ್ಯಕ್ತಿಯೊಬ್ಬ ಆರೋಪಿಸಿದ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.

‘ದ ಮಿರರ್’ಗೆ ನೀಡಿದ ಸಂದರ್ಶನವೊಂದರಲ್ಲಿ 60 ವರ್ಷ ವಯಸ್ಸಿನ ಅತ್ಯಾಚಾರ ಸಂತ್ರಸ್ತ, ‘1961ರಲ್ಲಿ ನಾನು ಡ್ರಾಪ್ ಕೇಳಿದಾಗ, ಮೇಫೈರ್ ಫ್ಲ್ಯಾಟ್‌ಗೆ ಕರೆದುಕೊಂಡು ಹೋಗಿ ಸರ್ ಹೀತ್ ನನ್ನ ಮೇಲೆ ಅತ್ಯಾಚಾರವೆಸಗಿದ್ದರು,’ ಎಂದು ಆರೋಪಿಸಿದ್ದು, ‘ಬಾಲಕನಾಗಿದ್ದಾಗ ತಂದೆ ಹಾಗೂ ಇತರೆ ಶಿಶುಕಾಮಿ ಸ್ನೇಹಿತರಿಂದ ಸಾಕಷ್ಟು ದೌರ್ಜನ್ಯವನ್ನು ಅನುಭವಿಸಿದ್ದೇನೆ,’ ಎಂದು ಹೇಳಿಕೊಂಡಿದ್ದಾರೆ.

‘1965ರವರೆಗೂ ಲೈಂಗಿಕ ದೌರ್ಜನ್ಯವೆಸಗಿದವರ ಬಗ್ಗೆ ಗೊತ್ತಿರಲಿಲ್ಲ. ದಿನ ಪತ್ರಿಕೆಯೊಂದರಲ್ಲಿ ಮಾರ್ಗರೇಟ್ ಥ್ಯಾಚರ್‌ ಅವರೊಂದಿಗೆ ನಿಂತಿದ್ದ ಚಿತ್ರ ನೋಡಿದಾಗ, ಅವರನ್ನು ಗುರುತಿಸಿದ್ದೆ. ನಂತರ ಅವರು ಬೆಕ್ಸ್ಲಿ ಸಂಸದರೆಂದು ಗೊತ್ತಾಯಿತು. ಅವರು ಎಸಗಿರುವ ದೌರ್ಜನ್ಯದ ಬಗ್ಗೆ ಹೇಳಿದಾಗ, ಯಾರೂ ನನ್ನನ್ನು ನಂಬಲಿಲ್ಲ. ನನ್ನದು ಕಲ್ಪನೆ ಎಂದು ಬೈದರು,’ ಎಂದು ಅವರು ಹೇಳಿಕೊಂಡಿದ್ದಾರೆ.

ಸರ್ ಹೀತ್ 70ರ ದಶಕದಲ್ಲಿ ನಾಲ್ಕು ವರ್ಷಗಳ ಕಾಲ ಪ್ರಧಾನಿಯಾಗಿದ್ದರು. ಅತ್ಯಂತ ಗಣ್ಯರ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಕೇಳಿ ಬಂದವರಲ್ಲಿ ಇವರು ಪ್ರಮುಖರು.

ಪ್ರಕರಣದ ಬಗ್ಗೆ ಸ್ವತಂತ್ರ ಪೊಲೀಸ್ ಸಂಸ್ಥೆಯೊಂದು ತನಿಖೆ ನಡೆಸಲಿದ್ದು, ಎಡ್ವರ್ಡ್ ಅವರಿಂದ ದೌರ್ಜನ್ಯ ಒಳಗಾದವರು ಯಾರಾದರೂ ಇದ್ದರೆ, ಮುಂದೆ ಬರಬೇಕೆಂದು ಹೇಳಿದೆ.

Write A Comment