ಕರಾಚಿ: ಪಾಕಿಸ್ತಾನ ಭಯೋತ್ಪಾದಕ ಚಟುವಟಿಕೆಯಲ್ಲಿ ಭಾಗಿಯಾಗುತ್ತಿದೆ ಎಂದು ಹೇಳುತ್ತಿರುವ ಭಾರತ ಆರೋಪ ಮಾಡುವುದನ್ನು ಬಿಟ್ಟು ಮೊದಲು ಸಾಕ್ಷ್ಯಾಧಾರಗಳನ್ನು ಒದಗಿಸಲು ಎಂದು ಪಾಕಿಸ್ತಾನ ಗುರುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯ ವಕ್ತಾರ ಸೈಯದ್ ಕ್ವಾಜಿ ಖಲೀಲುಲ್ಲ ಅವರು, ಭಾರತ ಸಾಕ್ಷ್ಯಾಧಾರಗಳನ್ನು ಒದಗಿಸುವುದನ್ನು ಬಿಟ್ಟು ಪಾಕಿಸ್ತಾನ ವಿರುದ್ಧ ನಿರಂತರವಾಗಿ ಆರೋಪಗಳನ್ನು ವ್ಯಕ್ತಪಡಿಸುತ್ತಿದೆ. ಈ ಆರೋಪಗಳು ಆಧಾರ ರಹಿತವಾಗಿದ್ದು ಪಾಕಿಸ್ತಾನ ಇಂತಹ ಆರೋಪಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಉಧಂಪುರದ ಹೆದ್ದಾರಿಯಲ್ಲಿ ಇಬ್ಬರು ಉಗ್ರರು ನಡೆಸಿದ ಗುಂಡಿನ ಕಾಳಗದಲ್ಲಿ 2 ಯೋಧರು ಸಾವನ್ನಪ್ಪಿದ್ದರಲ್ಲದೇ, 8 ಮಂದಿ ಗಾಯಗೊಂಡಿದ್ದರು. ಉಗ್ರರ ಗುಂಡಿನ ದಾಳಿಗೆ ಪ್ರತ್ಯುತ್ತರ ನೀಡಿದ್ದ ಭಾರತೀಯ ಯೋಧರು ಓರ್ವ ಉಗ್ರನನ್ನು ಹೊಡೆದುರುಳಿಸಿದ್ದರಲ್ಲದೇ, ಮತ್ತೋರ್ವ ಉಗ್ರನನ್ನು ಸಜೀವವಾಗಿ ಬಂಧನಕ್ಕೊಳಪಡಿಸಿದ್ದರು. ಬಂಧಿತ ಉಗ್ರ ಪಾಕಿಸ್ತಾನ ಮೂಲದ ಉಸ್ಮನ್ ಖಾನ್ ಹೇಳಲಾಗುತಿತ್ತು.