ಒಮ್ಮೊಮ್ಮೆ ಹಳದಿ ಬಣ್ಣಕ್ಕೆ ತಿರುಗೋ ಹಲ್ಲುಗಳ ನಮ್ಮನ್ನು ಮುಜುಗರಕ್ಕಿಡು ಮಾಡುತ್ತೆ. ಮಾರುಕಟ್ಟೆಯಲ್ಲಿ ಸಿಗೋ ಯಾವ ಟೂತ್ ಪೇಸ್ಟ್ ಗಳು ಹಳದಿ ಬಣ್ಣ ನಿವಾರಿಸೋದರಲ್ಲಿ ನಿಮ್ಮ ಸಹಾಯಕ್ಕೆ ಬರೋದಿಲ್ಲ.
ಅದಕ್ಕೇನು ಗಾಬರಿ ಪಡಬೇಕಿಲ್ಲ. ಮನೆಯಲ್ಲಿ ಅಡುಗೆಗೆ ಬಳಸುವ ಉಪ್ಪು ಅಥವಾ ಸೋಡಾವನ್ನು ಆಗಾಗ ಹಲ್ಲಿಗೆ ಉಜ್ಜುವುದರಿಂದ ಈ ಸಮಸ್ಯೆ ನಿವಾರಣೆಯಾಗುತ್ತದೆ. ಆಹಾರದಲ್ಲಿ ಅಥವಾ ಜ್ಯೂಸ್ ನಲ್ಲಿ ನೆಲ್ಲಿಕಾಯಿ ಬಳಕೆಯನ್ನು ಹೆಚ್ಚು ಮಾಡೋದರಿಂದಲೂ ಹಳದಿ ಹಲ್ಲಿನ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮಾತ್ರವಲ್ಲ ನೆಲ್ಲಿಕಾಯಿ ಚೂರ್ಣ, ನೆಲ್ಲಿಕಾಯಿ ಪುಡಿಯಿಂದ ಹಲ್ಲುಜ್ಜುವುದರಿಂದ ಹಲ್ಲಿನ ಹಳದಿಯಾಗುವಿಕೆ ಹಾಗೂ ಹಲ್ಲು ಹಾಳಾಗುವುದನ್ನು ತಪ್ಪಿಸಬಹುದು. ಪ್ರತಿನಿತ್ಯ ಆಹಾರ ಸೇವನೆಯ ನಂತರ ಸೇಬುಹಣ್ಣನ್ನು ಚೆನ್ನಾಗಿ ಅಗೆದು ತಿನ್ನುವುದರಿಂದ ಹಲ್ಲುಗಳು ಮುತ್ತಿನಂತೆ ಬೆಳ್ಳಗಾಗುತ್ತದೆ. ಸೇಬು ಹಣ್ಣಿನಂತೆ ಮೂಲಂಗಿ,ಕ್ಯಾರೇಟನ್ನೂ ಬಳಸಬಹುದು.
ಪ್ರತಿ ಬಾರಿ ಆಹಾರ ಸೇವನೆಯ ನಂತರ ಹಲ್ಲುಜ್ಜುವುದರಿಂದ ಹಲ್ಲುಗಳು ದಿನವಿಡಿ ಹೊಳಪು ಕಳೆದುಕೊಳ್ಳುವುದಿಲ್ಲ. ಇದಲ್ಲದೇ ಉಪ್ಪಿಗೆ ಲಿಂಬು ರಸ ಬೆರೆಸಿ ಹಲ್ಲಿನ ಮೇಲೆ ಹಚ್ಚಿಕೊಂಡು ಎರಡು ನಿಮಿಷದ ನಂತರ ತೊಳೆದುಕೊಳ್ಳುವುದರಿಂದಲೂ ಒಳ್ಳೆಯ ಪ್ರತಿಫಲ ಪಡೆಯಬಹುದು.