ಅಂತರಾಷ್ಟ್ರೀಯ

ಮಂಗಳ ಗ್ರಹದಲ್ಲಿ ಮನುಷ್ಯರು ! ನಡೆಯುತ್ತಿದೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ; ಈ ಚಿತ್ರಗಳನ್ನು ನೋಡಿ…

Pinterest LinkedIn Tumblr

mars112

ವಾಷಿಂಗ್ಟನ್: ಮಂಗಳ ಗ್ರಹಕ್ಕೆ ಮನುಷ್ಯರನ್ನು ಕಳುಹಿಸಲು ನಾಸಾ ಸಿದ್ದತೆ ನಡೆಸುತ್ತಿದ್ದರೆ, ಇತ್ತ ಮಂಗಳ ಗ್ರಹದಲ್ಲಿ ಮನುಷ್ಯರು ಪತ್ತೆಯಾಗಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾಗಿದೆ. ಚರ್ಚೆಗಳು ಆರಂಭವಾಗಿದ್ದು ಮಾತ್ರ ಅಲ್ಲ. ಮಂಗಳನಲ್ಲಿ ಮನುಷ್ಯರು ಇದ್ದಾರೆ ಎನ್ನುವುದಕ್ಕೆ ಆಧಾರಗಳನ್ನು ಸಹ ಜನ ನೀಡುತ್ತಿದ್ದಾರೆ.

ನಾಸಾ ಮಂಗಳನಲ್ಲಿಗೆ ಈಗಾಗಲೇ ಕ್ಯೂರಿಯಾಸಿಟಿ ನೌಕೆಯನ್ನು ಕಳಹಿಸಿದ್ದು, ಈ ನೌಕೆ ಮಂಗಳ ಗ್ರಹದ ಚಿತ್ರಗಳನ್ನು ಕಳುಹಿಸುತ್ತಿದೆ. ಈ ಚಿತ್ರಗಳನ್ನು ನಾಸಾ ತನ್ನ ವೆಬ್‍ಸೈಟ್‍ನಲ್ಲಿ ಪ್ರಕಟಿಸುತ್ತಿದೆ. ಆದರೆ ಈ ನೌಕೆ ಕಳುಹಿಸಿದ ಎರಡು ಚಿತ್ರದಲ್ಲಿ ಮನುಷ್ಯನ ದೇಹವನ್ನೇ ಹೊಲುವ ಅಸ್ಪಷ್ಟ ಆಕೃತಿ ಒಂದು ಕಂಡು ಬಂದಿದೆ. ಹೀಗಾಗಿ ಜನ ಮಂಗಳ ಗ್ರಹದಲ್ಲಿ ಮನುಷ್ಯರು ಈಗಾಗಲೇ ಇದ್ದಾರೆ ಎಂದು ವಾದಿಸುತ್ತಿದ್ದರೆ ಇನ್ನು ಕೆಲವರು ಅಲ್ಲಿ ಕಾಣುತ್ತಿರುವ ಅಸ್ಪಷ್ಟ ಆಕೃತಿ ಮಹಿಳೆಯದ್ದೇ ಎನ್ನುವ ವಾದವನ್ನು ಮಂಡಿಸುತ್ತಿದ್ದಾರೆ.

mars11

mars1

women-figure-on-mars

ಈ ಚಿತ್ರದಲ್ಲಿ ಕಾಣುತ್ತಿರುವ ಅಸ್ಪಷ್ಟ ಆಕೃತಿಯ ಬಗ್ಗೆ ನಾಸಾ ಇನ್ನೂ ಯಾವುದೇ ಸ್ಪಷ್ಟನೆ ನೀಡದ ಕಾರಣ ಅಂತರಿಕ್ಷ ವಿಚಾರದ ಬಗ್ಗೆ ಅಧ್ಯಯನ ನಡೆಸುತ್ತಿರುವ ವ್ಯಕ್ತಿಗಳ ಮಧ್ಯೆ ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರದ ಬಗ್ಗೆ ಈಗ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

Write A Comment