ಜಗತ್ತಿಗೆ ಮಾರಕ ಎನಿಸಿರುವ ಇಸಿಸ್ ಉಗ್ರರು ಇದೀಗ ಬ್ರಿಟನ್ ಮಹಾರಾಣಿ ಎಲಿಜಬೆತ್ ಅವರನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದಾರೆ ಎಂಬ ಆಘಾತಕಾರಿ ಅಂಶವೊಂದು ಬಯಲಾಗಿದೆ.
ಮುಂದಿನ ವಾರ ನಡೆಯಲಿರುವ 2ನೇ ವಿಶ್ವ ಯುದ್ದದ ವಿಜಯೋತ್ಸವ ಸಮಾರಂಭದಲ್ಲಿ ಬೋಸ್ಟನ್ ಮ್ಯಾರಥಾನ್ನಲ್ಲಿ ನಡೆಸಿದ್ದ ದಾಳಿಯ ಮಾದರಿಯಲ್ಲೇ ಪ್ರೆಷರ್ ಕುಕ್ಕರ್ ಬಾಂಬ್ ಸಿಡಿಸಿ ಮಹಾರಾಣಿ ಅವರನ್ನು ಹತ್ಯೆ ಮಾಡಲು ಇಸಿಸ್ ಉಗ್ರರು ಯೋಜನೆ ರೂಪಿಸಿದ್ದು ಈ ಹಿನ್ನೆಲೆಯಲ್ಲಿ ಭಾರೀ ಬಿಗಿ ಭದ್ರತೆ ಒದಗಿಸಲಾಗಿದೆ.
ಮಹಾರಾಣಿ ಎಲಿಜಬೆತ್ ಅಲ್ಲದೆ ಮಹಾರಾಜ ಚಾರ್ಲ್ಸ್, ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಕೂಡ ಉಗ್ರರ ಟಾರ್ಗೆಟ್ ಆಗಿದ್ದಾರೆ ಎನ್ನಲಾಗಿದ್ದು 2ನೇ ಮಹಾಯುದ್ಧದ ವಿಜಯೋತ್ಸವ ಸಮಾರಂಭದಲ್ಲಿ ಫಾರ್ ಈಸ್ಟ್ ಕ್ಯಾಂಪೇನ್ನ 1 ಸಾವಿರ ಹಿರಿಯ ಯೋಧರು ಹಾಗೂ ಸೇನಾ ಪಡೆ ಯೋಧರು ಕೂಡ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಅಷ್ಟೇ ಅಲ್ಲ, ದೊಡ್ಡ ಸಂಖ್ಯೆಯಲ್ಲಿ ಸಾರ್ವಜನಿಕರು ಕೂಡ ಸಮಾರಂಭಕ್ಕೆ ಆಗಮಿಸಲಿರುವುದರಿಂದ ಮತ್ತಷ್ಟು ಆತಂಕ ಹೆಚ್ಚಿದೆ.