ಅಂತರಾಷ್ಟ್ರೀಯ

ಲಂಡನ್ ರಾಣಿ ಎಲಿಜಬೆತ್- 2 ಮೇಲೆ ದಾಳಿಗೆ ಇಸೀಸ್ ಸಂಚು!

Pinterest LinkedIn Tumblr

queenಲಂಡನ್: ಎರಡನೇ ವಿಶ್ವಯುದ್ಧದ ಸ್ಮರಣಾರ್ಥವಾಗಿ ಲಂಡನ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬ್ರಿಟನ್ ರಾಣಿ ಎಲಿಜಬೆತ್- 2 ಅವರನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸಲು ಇಸ್ಲಾಮಿಕ್ ಸ್ಟೇಟ್ ಉಗ್ರರು ಯೋಜನೆ ರೂಪಿಸಿದ್ದಾರೆ.

ಯು.ಕೆ ನಲ್ಲಿ ಸಮರ್ಥ ಬಾಂಬರ್ ಗಳನ್ನು ಹೊಂದಿರುವ ಇಸ್ಲಾಮಿಕ್ ಸ್ಟೇಟ್ ಸಂಘಟನೆ, ಒಂಟಿ ಉಗ್ರ (ಲೋನ್ ಉಲ್ಫ್) ದಾಳಿ ನಡೆಸಲು ಸಿದ್ಧತೆ ನಡೆಸಿದೆ. ದಾಳಿ ನಡೆಸುವ ಬಗೆಗಿನ ಯೋಜನೆಯನ್ನು ಸಿರಿಯಾದ ಹಿರಿಯ ಜಿಹಾದಿ ಬ್ರಿಟನ್ ನಲ್ಲಿರುವ ಉಗ್ರರಿಗೆ ಕಳಿಸಿದ್ದಾನೆ. ಇದರೊಂದಿಗೆ ದಾಳಿಗೆ ಅಗತ್ಯವಿರುವ ದೇಣಿಗೆ ಸಂಗ್ರಹ ಹಾಗೂ ಶಸ್ತ್ರಾಸ್ತ್ರಗಳ ಸಂಗ್ರಹಕ್ಕೆ ಸಂಬಂಧಿಸಿದಂತೆಯೂ ಸಲಹೆ ನೀಡಿದ್ದಾನೆ. ಬ್ರಿಟನ್ ನಲ್ಲಿ ದಾಳಿ ನಡೆಸಲು ಉದ್ದೇಶಿಸುವವರಿಗೆ ಸಿರಿಯಾದಲ್ಲಿ ತರಬೇತಿ ನೀಡಲಾಗಿದೆ.

ಮಾಧ್ಯಮವೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಈ ವಿಷಯ ಬಯಲಾಗಿದ್ದು, ಬ್ರಿಟನ್ ನ ರಾಣಿ ಎಲಿಜಬೆತ್- 2  ಹಾಗೂ ಕುಟುಂಬದವರು ಎರಡನೇ ವಿಶ್ವಯುದ್ಧದ ಸ್ಮರಣಾರ್ಥ ಕಾರ್ಯಕ್ರಮದಲ್ಲಿ ನಡೆಸಲು ಉದ್ದೇಶಿಸಲಾಗಿರುವ ದಾಳಿಯ ಮುಖ್ಯ ಗುರಿ ಎಂದು ಜಿಹಾದಿಯೊಬ್ಬ ಹೇಳಿದ್ದಾನೆ. ಸಿರಿಯಾಗೆ ಬಂದು ಹೋರಾಟ ಮಾಡುವ ಬದಲು ಬ್ರಿಟನ್ ನಲ್ಲೇ ಜಿಹಾದಿಗಳನ್ನು ತಯಾರಿಸಲು ಇಸ್ಲಾಮಿಕ್ ಸ್ಟೇಟ್ ನಿರ್ಧರಿಸಿದೆ ಎಂದು ಹೇಳಲಾಗಿದೆ.

Write A Comment