ಸಾಮಾಜಿಕ ಜಾಲತಾಣಗಳಲ್ಲಿ ಇಂದು ಸುದ್ದಿ ಓದುವುದು ಹೆಚ್ಚುತ್ತಿದ್ದು ಕೆಲವು ಸುದ್ದಿ ಸಂಸ್ಥೆಗಳೂ ಸಹ ಇದೇ ಕಾರಣಕ್ಕಾಗಿ ಮೊಬೈಲ್ ಯಾಪ್ ಗಳನ್ನೂ ರೂಪಿಸುತ್ತಿದೆ. ಈ ಮಾಧ್ಯಮಗಳ ಸುದ್ದಿಯ ಅಬ್ಬರವನ್ನು ನೋಡಿದ ಫೇಸ್ ಬುಕ್ ಇದೀಗ ಸ್ವತಃ ಬ್ರೇಕಿಂಗ್ ನ್ಯೂಸ್ ನೀಡಲು ಮುಂದಾಗಿದೆ.
ಇತ್ತೀಚೆಗಷ್ಟೇ ಸುದ್ದಿ ನೀಡುವ ಸಲುವಾಗಿ ಟ್ವಿಟ್ಟರ್ ಮೊಬೈಲ್ ನಲ್ಲಿ ನ್ಯೂಸ್ ಟ್ಯೂಬ್ ರೂಪಿಸಿ ಅಂದಂದಿನ ಸುದ್ದಿ ನೀಡುತ್ತಿದೆ. ಇದೇ ರೀತಿ ಫೇಸ್ ಬುಕ್ ಸಹ ಇದೀಗ ಸುದ್ದಿ ಜಾಲತಾಣವನ್ನು ಆರಂಭಿಸಲಿದ್ದು ಈಗಾಗಲೇ ಇದರ ಕುರಿತು ಎಲ್ಲ ಸಿದ್ದತೆ ಆರಂಭಿಸಿದೆ ಎನ್ನಲಾಗಿದೆ.
ಅಲ್ಲದೇ ಫೇಸ್ ಬುಕ್ ನ ಈ ಮಹತ್ವಾಕಾಂಕ್ಷಿ ಯೋಜನೆ ಆಲ್ಫಾ ಟೆಸ್ಟಿಂಗ್ ನಲ್ಲಿದ್ದು ಸದ್ಯದಲ್ಲಿಯೇ ಫೇಸ್ ಬುಕ್ ಬಳಕೆದಾರರು ಈ ಸೌಲಭ್ಯವನ್ನೂ ಪಡೆಯಲಿದ್ದಾರೆ.