ಲಂಡನ್: ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ನಿಮ್ಮ ಮೊಬೈಲ್ ನಂಬರನ್ನು ಹಾಕುವುದು ಆಪಾಯಕಾರಿ ಎಂದು ಸಂಶೋಧನಾ ವರದಿಯೊಂದು ಎಚ್ಚರಿಸಿದೆ.
ಫೇಸ್ ಬುಕ್ ನಲ್ಲಿ ಲಭ್ಯವಾಗುವ ಮೊಬೈಲ್ ನಂಬರ್ ಮೂಲಕ ಹ್ಯಾಕರ್ ಗಳು ಸುಲಭವಾಗಿ ವೈಯಕ್ತಿಕ ಮಾಹಿತಿಗಳನ್ನು ಕದಿಯಲು ಸಾಧ್ಯವಾಗುತ್ತದೆ. ಅಲ್ಲದೇ ಈ ವಿವರಗಳನ್ನು ಬೇರೆಯವರಿಗೆ ಮಾರಾಟ ಮಾಡುವ ಸಂಭವವೂ ಇರುತ್ತದೆ ಎಂದು ವರದಿ ತಿಳಿಸಿದೆ.
ಅದರಲ್ಲೂ ಮೊಬೈಲ್ ಬ್ಯಾಂಕಿಂಗ್ ಸೇರಿದಂತೆ ಇನ್ನಿತರೆ ಖಾಸಗಿ ಸಂಗತಿಗಳನ್ನು ಮೊಬೈಲ್ ನಲ್ಲಿ ಸಂಗ್ರಹಿಸಿಟ್ಟುಕೊಂಡಿರುವವರ ಮಾಹಿತಿಗಳಿಗೆ ಹ್ಯಾಕರ್ ಗಳು ಲಗ್ಗೆ ಹಾಕುವ ಸಾಧ್ಯತೆ ಹೆಚ್ಚು ಎಂದು ಸಂಶೋಧನಾ ವರದಿ ಹೇಳಿದೆ. ಹೀಗಾಗಿ ಮೊಬೈಲ್ ನಂಬರನ್ನು ಫೇಸ್ ಬುಕ್ ನಲ್ಲಿ ಹಾಕದಿರುವುದೇ ಕ್ಷೇಮ ಎಂದು ಅದು ಸೂಚಿಸಿದೆ. ಒಂದು ವೇಳೆ ಮೊಬೈಲ್ ನಂಬರ್ ಹಾಕುವುದಿದ್ದರೂ ಅದು ಇತರೆಯವರಿಗೆ ಕಾಣದಂತೆ ಫೇಸ್ ಬುಕ್ ಸೆಟ್ಟಿಂಗ್ಸ್ ಮೂಲಕ ಮಾಡಬಹುದಾಗಿದೆ.