ಅಂತರಾಷ್ಟ್ರೀಯ

ಈ ಐ ಫೋನ್ ಬೆಲೆ ಕೇಳಿದ್ರೆ ದಂಗಾಗುವುದು ಗ್ಯಾರಂಟಿ !

Pinterest LinkedIn Tumblr

moಇತ್ತೀಚೆಗೆ ನಾನಾ ಬಗೆಯ, ವಿಶಿಷ್ಟ ವಿನ್ಯಾಸದ ಮೊಬೈಲ್ ಗಳು ಮಾರುಕಟ್ಟೆಗೆ ಬರುತ್ತಿವೆ. ಇದರ ಜತೆಗೆ ದರಗಳ ಸ್ಪರ್ಧೆಯೂ ಸಾಮಾನ್ಯ. ಆದರೆ ಲಾಸ್ಏಂಜಲೀಸ್ ಮೂಲದ ಬ್ರಿಕ್ಕ್ ಕಂಪನಿ ಬರೋಬ್ಬರಿ  1.3 ಕೋಟಿ ರೂಪಾಯಿ ಮೌಲ್ಯದ ಐ ಫೋನ್ ಅನ್ನು ಬಿಡುಗಡೆ ಮಾಡುವ ಮೂಲಕ ಕುತೂಹಲಕ್ಕೆ ಕಾರಣವಾಗಿದೆ.

ಹೌದು. ಈ ಐ ಫೋನ್ ಚಿನ್ನ, ಪ್ಲಾಟಿನಂ ಹಾಗೂ ವಜ್ರಗಳಿಂದ ತಯಾರಾಗಿದ್ದು ಈ ಪ್ರತಿಷ್ಠಿತ ಮೊಬೈಲ್‌ಗಳು ಸುಮಾರು 51 ಲಕ್ಷ ರೂಪಾಯಿಗಳ  ಆರಂಭಿಕ ಬೆಲೆಯಲ್ಲಿಯೂ ಸಿಗಲಿವೆ.

ಲೈಫ್‌ಸ್ಟೈಲ್ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಉತ್ಪನ್ನಗಳನ್ನು ತಯಾರಿಸುವ  ಬ್ರಿಕ್ಕ್ ಕಂಪನಿ ಬಿಡುಗಡೆಗೊಳಿಸಿದ ಈ ದುಬಾರಿ ಬೆಲೆಯ ಐ ಫೋನ್ 24 ಕ್ಯಾರೆಟ್ ಹಳದಿ ಚಿನ್ನದ, 18 ಕ್ಯಾರೆಟ್ ಪಿಂಕ್ ಚಿನ್ನ ಹಾಗೂ ಪ್ಲಾಟಿನಂ ಲೋಹಗಳಿಂದ ನಿರ್ಮಿಸಲಾಗಿದ್ದು ವಜ್ರದಲ್ಲಿಯೇ ಮಾಡಿರುವ ಬ್ರಿಕ್ಕ್ ಲೋಗೋವಿನೊಂದಿಗೆ ಡೈಮಂಡ್ ಓವ್ನಿ ಫೋನ್‌ಗಳು ಲಭ್ಯವಿವೆ. ಇದರ ಮೌಲ್ಯ ಸುಮಾರು 1.3 ಕೋಟಿ ರೂ. ಇದನ್ನು ವಜ್ರದಿಂದಲೇ ಸುತ್ತುವರಿದ ಝೀರೋ ಹ್ಯಾಲಿಬರ್ಟನ್ ಕೇಸ್‌ನೊಂದಿಗೆ ಪ್ಯಾಕ್ ಮಾಡಲಾಗಿರುತ್ತದೆ ಎಂದು ಕಂಪನಿ ತಿಳಿಸಿದೆ.

ಅಂದಹಾಗೆ ಈ ಐ ಫೋನ್ ಅನ್ನು ಮೊದಲೇ ಆರ್ಡರ್ ಮಾಡಿ ತರಿಸಿಕೊಳ್ಳಬೇಕಾಗಿದ್ದು ಸದ್ಯಕ್ಕೆ ಯಾವುದೇ ಮೊಬೈಲ್ ಶಾಪ್ ಗಳಲ್ಲಿ ನೇರ ಮಾರಾಟ ಮಾಡಲಾಗುವುದಿಲ್ಲವಂತೆ.

Write A Comment