ಮಾಸ್ಕೋ: ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವ ಪುರುಷರು ಹೃದಯ ಸಂಬಂಧಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.
ಚೆನ್ನಾಗಿ ನಿದ್ರೆ ಮಾಡುವವರಿಗೆ ಹೋಲಿಸಿದರೆ ನಿದ್ರಾಹೀನತೆ ಅನುಭವಿಸುತ್ತಿರುವ ಪುರುಷರು ಹೃದಯ ಸ್ಥಂಭನ (ಹಾರ್ಟ್ ಅಟ್ಯಾಕ್)ಗೆ ತುತ್ತಾಗುವ ಸಾಧ್ಯತೆ 1.5 ರಿಂದ 4 ಪಟ್ಟು ಹೆಚ್ಚಾಗಿರುತ್ತದೆ. ಜತೆಗೆ ಮಯೋಕಾರ್ಡಿಯಲ್ ಇನ್ಪ್ರಾ ಕ್ಷನ್ಗೆ ತುತ್ತಾಗುವ ಸಾಧ್ಯತೆ 2 ರಿಂದ 2.6 ಪಟ್ಟು ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಗಳು ಮತ್ತು ಪಾರ್ಶ್ವವಾಯುವಿಗೂ ನಿದ್ರಾಹೀನತೆಗೂ ಹತ್ತಿರದ ಸಂಬಂಧವಿದೆ. ಸಾಮಾನ್ಯ ಮನುಷ್ಯ ದಿನವೊಂದಕ್ಕೆ 7 ರಿಂದ 8 ಗಂಟೆ ನಿದ್ರೆ ಮಾಡುತ್ತಾರೆ. ಇದಕ್ಕಿಂತಲೂ ಕಡಿಮೆ ಅವಧಿಯ ನಿದ್ರೆ ಮಾಡುವವರು ಮತ್ತು ನಿದ್ರಾಹೀನತೆಯಿಂದ ಬಳಲುವವರಲ್ಲಿ ಈ ಸಮಸ್ಯೆ ಹೆಚ್ಚು ಎಂದು ಸಂಶೋಧಕರು ತಿಳಿಸಿದ್ದಾರೆ.