ಅಂತರಾಷ್ಟ್ರೀಯ

ಇದು ಮಾನವನ ಕೃತಕ ಹೃದಯ!

Pinterest LinkedIn Tumblr

hrt-fiಸದ್ಯ ಅಧ್ಯಯನದ ದೃಷ್ಟಿಯಿಂದ ಮಾತ್ರ ಬಳಸಲು ಅರ್ಹವಾಗಿರುವ ಈ ಕೃತಕ ಹೃದಯ ಮುಂದೊಂದು ದಿನ ಮಾನವನ ಜೀವ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಬಹುದೆಂದೇ ವಿಜ್ಞಾನ ಜಗತ್ತಿನಲ್ಲಿ ವಿಶ್ಲೇಷಿಸಲಾಗುತ್ತಿದೆ.

***

ಹಸುವಿನ ಹೃದಯದ ಕಾಂಡಕೋಶದಿಂದ ತಯಾರಿಸಲಾದ ಕೃತಕ ಕವಾಟ ಅಳವಡಿಸಿ ಚೆನ್ನೈನಲ್ಲಿ ವೃದ್ಧೆಯೊಬ್ಬರಿಗೆ ಪುನರ್ಜನ್ಮ ಕಲ್ಪಿಸಿದ ಕೆಲ ದಿನಗಳಲ್ಲೇ ಕ್ಯಾಲಿಫೋರ್ನಿಯಾ ವಿಜ್ಞಾನಿಗಳು ಕೂಡ ಇಂಥದ್ದೇ ಕ್ರಾಂತಿ ಮಾಡಿದ್ದಾರೆ. ಕೃತಕ ಮಾನವ ಹೃದಯ ಅಭಿವೃದ್ಧಿಪಡಿಸುವ ಮೂಲಕ ವೈದ್ಯ ಲೋಕದಲ್ಲಿ ಪವಾಡ ಸೃಷ್ಟಿಸಿದ್ದಾರೆ. ಸದ್ಯ ಅಧ್ಯಯನದ ದೃಷ್ಟಿಯಿಂದ ಮಾತ್ರ ಬಳಸಲು ಅರ್ಹವಾಗಿರುವ ಈ ಕೃತಕ ಹೃದಯ ಮುಂದೊಂದು ದಿನ ಮಾನವನ ಜೀವ ಉಳಿಸುವಲ್ಲೂ ಪ್ರಮುಖ ಪಾತ್ರ ವಹಿಸಬಹುದೆಂದೇ ವಿಜ್ಞಾನ ಜಗತ್ತಿನಲ್ಲಿ ವಿಶ್ಲೇಷಿಸಲಾಗುತ್ತಿದೆ.

ಹೃದಯ ದೌರ್ಬಲ್ಯ ತಡೆಗೆ ಸಹಕಾರಿ: ಹುಟ್ಟಿನಿಂದಲೇ ಬರುವ ಹೃದಯದ ದೌರ್ಬಲ್ಯ ಮತ್ತಿತರ ಸಮಸ್ಯೆಗಳ ತಡೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಕೃತಕ ಹೃದಯ ಉಪಯೋಗಕ್ಕೆ ಬರಲಿದೆ. ಗರ್ಭಿಣಿಯಾಗಿರುವ ಸಂದರ್ಭದಲ್ಲಿ ಮಹಿಳೆಯರು ಸೇವಿಸುವ ಔಷಧಗಳು ಗರ್ಭದಲ್ಲಿರುವ ಶಿಶುವಿನ ಹೃದಯದ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತವೆ. ಇಂಥ ಸಂದರ್ಭದಲ್ಲಿ ಯಾವ ಔಷಧ ಸೇವಿಸಿದರೆ ಹೃದಯದ ಬೆಳವಣಿಗೆ ಮೇಲೆ ಅಡ್ಡಪರಿಣಾಮವಾಗುತ್ತದೆ? ಯಾವ ಔಷಧ ಸೇವಿಸಿದರೆ ಹಾನಿಯಾಗುವುದಿಲ್ಲ ಎಂಬುದನ್ನು ಕೃತಕ ಹೃದಯದ ಸಹಾಯದಿಂದ ಅಧ್ಯಯನ ಮಾಡಬಹುದಾಗಿದೆ.

ಬದಲಿ ಹೃದಯ?: ಹೃದಯಾಘಾತದಂತಹ ತುರ್ತ ಸಂದರ್ಭಗಳಲ್ಲಿ ವ್ಯಕ್ತಿಯನ್ನು ಬದುಕಿಸಲು ಕೃತಕ ಹೃದಯ ನೆರವಾಗಲಿದೆಯೇ ಎಂಬುದು ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಇನ್ನೂ ಸಾಕಷ್ಟು ಅಧ್ಯಯನ ನಡೆಸುವ ಅವಶ್ಯಕತೆ ಇದೆ ಎನ್ನುತ್ತಾರೆ ವಿಜ್ಞಾನಿಗಳು.

***

ಹೇಗಾಯ್ತು ಸೃಷ್ಟಿ?

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯ ಹಾಗೂ ಗ್ಲಾಡ್​ಸ್ಟೋನ್ ಇನ್ಸ್​ಟಿಟ್ಯೂಟ್ ವಿಜ್ಞಾನಿಗಳು 2 ವಾರಗಳಲ್ಲಿ ಚರ್ಮದ ಕಾಂಡಕೋಶ ಬಳಸಿಕೊಂಡು ವಂಶವಾಹಿಗಳ ಸಹಾಯದಿಂದ ಪುಟ್ಟ ಕೃತಕ ಹೃದಯ ಸೃಷ್ಟಿಸಿದ್ದಾರೆ. ಈ ಹೃದಯ ಮಾನವನ ಹೃದಯದಂತೆಯೇ ಬಡಿತವನ್ನೂ ಹೊಂದಿದೆ. ಇದರ ಸೃಷ್ಟಿಯಿಂದ, ಭ್ರೂಣಾವಸ್ಥೆಯಲ್ಲಿಯೇ ಮಾನವ ಹೃದಯ ಹೇಗೆ ಬೆಳವಣಿಗೆ ಹೊಂದುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಸಾಧ್ಯವಾಗಿದೆಯಂತೆ.

Write A Comment