ಅಂತರಾಷ್ಟ್ರೀಯ

ಗೂಗಲ್ ಆ್ಯಂಡ್ರಾಯ್ಡ್ ‘M’ : M ಅಂದರೆ ಮಾರ್ಶ್‌ಮಲ್ಲೋ

Pinterest LinkedIn Tumblr

Android_Marshmallow-fiಗೂಗಲ್‌ನ ಬಹು ನಿರೀಕ್ಷಿತ ಓಎಸ್ ಗೂಗಲ್ ಆ್ಯಂಡ್ರಾಯ್ಡ್ ಎಂ ನಲ್ಲಿ ಎಂ ಎಂದರೆ ಏನು? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಗೂಗಲ್ ಆ್ಯಂಡ್ರಾಯ್ಡ್  ಎಂ ನಲ್ಲಿ ಎಂ ಎಂದರೆ ಏನು? ಅದೊಂದು ಸಿಹಿ ತಿಂಡಿಯ ಹೆಸರು. ನೀವೇ ಊಹಿಸಿ ಎಂದು ಗೂಗಲ್ ಕಂಪನಿ ಜನರಿಗೆ ಹೇಳಿತ್ತು. ಜನರಿಂದ ಇದಕ್ಕೆ ವಿಧ ವಿಧದ ಉತ್ತರಗಳೂ ಲಭಿಸಿದ್ದವು.

ಇದೀಗ ಎಂ ಎಂದರೆ ಮಾರ್ಶ್‌ಮಲ್ಲೋ ಎಂದು ಗೂಗಲ್ ಹೇಳಿದೆ. ಮಾರ್ಶ್‌ಮಲ್ಲೋ ಕೂಡಾ ಒಂದು ಮಿಠಾಯಿಯ ಹೆಸರು. ಆ್ಯಂಡ್ರಾಯಿಡ್ ಎಂ  ಓಎಸ್, ಲಾಲಿಪಾಪ್ ಓಎಸ್‌ನ ತರುವಾಯ ಓಎಸ್ ಆಗಿದೆ ಎಂದು ಗೂಗಲ್ ತನ್ನ ಬ್ಲಾಗ್‌ನಲ್ಲಿ ಹೇಳಿದೆ.

ಓಎಸ್‌ಗಳಲ್ಲಿ ಹೆಚ್ಚಿನವುಗಳಿಗೆ ಸಿಹಿ ತಿಂಡಿಯ ಹೆಸರುಗಳನ್ನಿಡಲಾಗಿದೆ. ಮೊದಲಿಗೆ ಡಾನೆಟ್ (1.6), ಎಕ್ಲೇರ್ (2.0–2.1), ಫ್ರೋಯೋ(2.2-2.2.3), ಜಿಂಜರ್ ಬ್ರೆಡ್ (2.3-2.3.7), ಹನಿ ಕೋಂಬ್ (3.0–3.2.6), ಐಸ್ ಕ್ರೀಂ ಸ್ಯಾಂಡ್‌ವಿಚ್ (4.0–4.0.4), ಜೆಲ್ಲಿ ಬೀನ್ (4.1–4.3.1), ಕಿಟ್ ಕ್ಯಾಟ್ (4.4–4.4.4, 4.4W–4.4W.2) ಎಂಬ ಆಂಡ್ರಾಯ್ಡ್  ಓಎಸ್ ಸರಣಿಯಲ್ಲಿ ಹೊಸತಾಗಿ ಸೇರ್ಪಡೆಯಾಗಿದ್ದು ಲಾಲಿಪಾಪ್ (5.0–5.1.1) ಆಗಿತ್ತು. ಇದೀಗ ಲಾಲಿಪಾಪ್ ನಂತರ ಮಾರ್ಶ್‌ಮಲ್ಲೋ (ಆ್ಯಂಡ್ರಾಯ್ಡ್  6.0) ಸ್ಮಾರ್ಟ್‌ಫೋನ್ ಗಳಲ್ಲಿ ಜಾಗ ಪಡೆಯಲಿದೆ.

ಮಾರ್ಶ್‌ಮಲ್ಲೋ ಕಸ್ಟಮೈಸ್ ಮಾಡಲು ಅನುಕೂಲವಾಗುವಂತೆ ಹಾಗೂ ವಿವಿಧ ಆ್ಯಪ್‌ಗಳಿಗೆ ಅಗತ್ಯವಿರುವ ಬದಲಾವಣೆಗಳನ್ನು ಮಾಡುವುದಕ್ಕಾಗಿ ಡೆವಲಪರ್‌ಗಳು ಗೂಗಲ್ ಸೈಟ್‌ನಿಂದ ಮಾರ್ಶ್‌ಮೆಲ್ಲೋ ಡೆವಲಪರ್ ವರ್ಶನ್ ಡೌನ್‌ಲೋಡ್ ಮಾಡಬಹುದು ಎಂದು ಬ್ಲಾಗ್ ನಲ್ಲಿ ಹೇಳಲಾಗಿದೆ.

ಅಧಿಕ ಬ್ಯಾಟರಿ ಲೈಫ್,  ಹೆಚ್ಚಿನ ಅಪ್ಲಿಕೇಷನ್ ಮ್ಯಾನೇಜ್‌ಮೆಂಟ್, ಯುಎಸ್‌ಬಿ ಟೈಪ್ ಸಿ ಸಪೋರ್ಟ್, ಫಿಂಗರ್ ಪ್ರಿಂಟ್ ಪ್ರೈವೆಸಿ,  ಹೊಸ ಆ್ಯಂಡ್ರಾಯ್ಡ್ ಪೇ ಸಿಸ್ಟಂ  ಮೊದಲಾದ ವಿಶೇಷತೆಗಳೊಂದಿಗೆ ಮಾರ್ಶ್‌ಮೆಲ್ಲೋ ಮಾರುಕಟ್ಟೆಗೆ ಬರಲಿದೆ.

Write A Comment