ಅಂತರಾಷ್ಟ್ರೀಯ

ಲಕ್ಷಾಂತರ ಮಂದಿ ಬೆಳಗಾಗುವುದರೊಳಗೆ ಬೆತ್ತಲಾದರು ! ಏಕೆ ಅಂತೀರಾ..?

Pinterest LinkedIn Tumblr

beವಿಶ್ವದಲ್ಲಿ ತಮ್ಮದೇ ಆದ ವರ್ಚಸ್ಸು ,ಹೆಸರು, ಕೀರ್ತಿ, ಬೆಳೆಸಿಕೊಂಡವರು ಸಾಮಾಜಿಕವಾಗಿ ರಾತ್ರಿ ಬೆಳಗಾಗುವುದರೊಳಗೆ ಬೆತ್ತಲಾದರೆ..? ಅದರಲ್ಲಿಯೂ ಇಂತಹ ವ್ಯಕ್ತಿಗಳ ಖಾಸಗಿ ಬದುಕು ಬಯಲಿಗೆ ಬಂದರೆ..? ಅರೆ ಇದೇನು ಸುದ್ದಿ ಅಂತೀರಾ..? ಈ ಸ್ಟೋರಿ ಓದಿ, ನಿಮಗೇ ಗೊತ್ತಾಗುತ್ತೆ.!

ಹೌದು. ಇಂದಿನ ಯಾಂತ್ರಿಕ ಜಗತ್ತಿನಲ್ಲಿ ಯಾರಲ್ಲಿಯೂ ಹೇಳಿಕೊಳ್ಳಲಾಗದ ಕೆಲವು ‘ಖಾಸಗಿ’ ರಹಸ್ಯಗಳನ್ನು ಹಲವರು ಅಂತರ್ಜಾಲದ ಮೂಲಕ ಜಗತ್ತಿನ ಯಾವುದೋ ಮೂಲೆಯಲ್ಲಿರುವವರ ಜತೆ ಹಂಚಿಕೊಂಡು ನೆಮ್ಮದಿ ಕಾಣುತ್ತಾರೆ. ಕೆಲವು ವೆಬ್ ಸೈಟ್ ಗಳೂ ಸಹ ಇದನ್ನು ಬೃಹತ್ ದಂಧೆಯಾಗಿಸಿಕೊಂಡಿದೆ. ಆದರೆ ಇದೀಗ ಇಂತಹ ಸೇವೆ ಒದಗಿಸುತ್ತಿದ್ದ ವೆಬ್ ಸೈಟ್ ಒಂದು ಹ್ಯಾಕರ್ ಗಳ ದಾಳಿಗೆ ಒಳಗಾಗಿದ್ದು ಲಕ್ಷಾಂತರ ಮಂದಿಯ ಖಾಸಗಿ ಸಹಸ್ಯ ಬಯಲಾಗಿದೆ.

ಆಶ್ಲೆ ಮಾಡಿಸನ್ (www.AshleyMadison.com)ಎಂಬ ಆನ್ ಲೈನ್ ಡೇಟಿಂಗ್ ವೆಬ್ ಸೈಟ್ ಹ್ಯಾಕ್ ಆಗಿದ್ದು 37 ಮಿಲಿಯನ್ ಬಳಕೆದಾರರ ರಹಸ್ಯವನ್ನು ಹ್ಯಾಕರ್ ಗಳು ಬಿಚ್ಚಿಟ್ಟಿದ್ದಾರೆ. ಇದರಲ್ಲಿದ್ದ ಲಕ್ಷಾಂತರ ಮಂದಿಯ ನಗ್ನ ಚಿತ್ರಗಳು , ಕಾಮೆಂಟ್ ಗಳು, ಕ್ರೆಡಿಟ್ ಕಾರ್ಡ್ ಮಾಹಿತಿ ಸೇರಿದಂತೆ ಹಲವಾರು ವಿಷಯಗಳು ಹೊರ ಬೀಳುವ ಮೂಲಕ ಹಲವು ಪ್ರಖ್ಯಾತ ವ್ಯಕ್ತಿಗಳ ಮನಸ್ಥಿತಿಯನ್ನು ನಗ್ನಗೊಳಿಸಿದ್ದು ಅದರಲ್ಲಿಯೂ ಬ್ರಿಟನ್ ಬಳಕೆದಾರರೇ ಹೆಚ್ಚಿದ್ದಾರೆ ಎನ್ನಲಾಗಿದೆ. ಅಲ್ಲದೇ ಇಂಗ್ಲೆಂಡ್ ನ ಪ್ರತಿಷ್ಟಿತ ವ್ಯಕ್ತಿಗಳ ರಹಸ್ಯವೂ ಬಯಲಾಗಿದೆ.   ಈ ಕುರಿತು ವೆಬ್ ಸೈಟ್ ನ ಕಾರ್ಯ ನಿರ್ವಾಹಕ ಅಧಿಕಾರಿ ಹ್ಯಾಕ್ ಆಗಿರುವುದನ್ನು ಖಚಿತ ಪಡಿಸುವುದರ ಜತೆಗೆ ಬಳಕೆದಾರರ ಕ್ಷಮೆ ಕೇಳಿದ್ದಾರೆ.

ಏನೇ ಇರಲಿ, ಅಂತರ್ಜಾಲವೆಂಬ ಮಾಯೆಯಲ್ಲಿ ಡೇಟಿಂಗ್ ವೆಬ್ ಸೈಟ್ ನ ಜಾಲದಲ್ಲಿ ಸಿಲುಕಿದವರೀಗ ಪರಿತಪಿಸುತ್ತಿರುವುದಂತೂ  ಸತ್ಯ. ಹಾಗಾಗಿ ಯಾವುದೇ ವೈಯಕ್ತಿಕ ಮಾಹಿತಿಯನ್ನು ಯಾವುದೇ ವೆಬ್ ಸೈಟ್ ನಲ್ಲಿ ಹಂಚಿಕೊಳ್ಳಬೇಕಾದರೆ ಎಚ್ಚರಿಕೆ ಇರಲೇಬೇಕು. ಇಲ್ಲವೆಂದರೆ ನೀವೂ ಬೆತ್ತಲಾಗ್ತೀರಾ, ಹುಷಾರ್ !

Write A Comment