ಯುವತಿಯರು, ಮಹಿಳೆಯರನ್ನು ಸೆಳೆಯಲು ಏನೇನೋ ಕಸರತ್ತು ಮಾಡುತ್ತಿರಾ? ಹಾಗೆಲ್ಲಾ ಮಾಡಬೇಡಿ ಅವರನ್ನು ಸುಲಭವಾಗಿ ಒಲಿಸಕೊಳ್ಳಲು ಇಲ್ಲಿದೆ ಉಪಾಯ. ಆದರೆ ಎಲ್ಲಾ ಮಹಿಳೆಯರು ಒಂದೇ ರೀತಿ ಇರುತ್ತಾರೆ ಎಂದು ಹೇಳಲಾಗದು. ಒಬ್ಬೊಬ್ಬರದು ಒಂದೊಂದು ಸ್ವಭಾವ. ಪುರುಷರ ಯಾವ ಗುಣವನ್ನು ಯುವತಿಯರು ಮೆಚ್ಚಿಕೊಳ್ಳುತ್ತಾರೆಂದು ಹೇಳಲು ಸಾಧ್ಯವಿಲ್ಲ.
ಬಹುತೇಕ ಹೆಣ್ಣುಮಕ್ಕಳು ತಮಾಷೆ ಮಾಡುವ ಹಾಸ್ಯಪ್ರಜ್ಞೆಯುಳ್ಳವರನ್ನು ಇಷ್ಟಪಡುತ್ತಾರೆ ಎಂದು ಹೇಳಲಾಗಿದೆ. ಆದರೆ ಇದನ್ನು ತಿಳಿಯದ ಹೆಚ್ಚಿನ ಯುವಕರು ಹುಡುಗಿಯರನ್ನು ಒಲಿಸಿಕೊಳ್ಳಲು ಏನೆಲ್ಲಾ ಸರ್ಕಸ್ ಮಾಡುತ್ತಾರೆ ಎಂದರೆ ಹುಡುಗಿಯರು ಕನಿಷ್ಟ ಇವರತ್ತ ತಿರುಗಿಯೂ ನೋಡುವುದಿಲ್ಲ. ಯುವಕರು ಈ ರಹಸ್ಯಗಳನ್ನು ತಿಳಿಯದೆ ತಮ್ಮಲ್ಲಿರುವ ಬೈಕು, ಬಟ್ಟೆ ಮೊಬೈಲ್ ಮೊದಲಾದವುಗಳನ್ನು ತೋರಿಸಿ ಆಕರ್ಷಿಸಲು ಮುಂದಾಗುತ್ತಾರೆ. ಆದರೆ ಏನು ಪ್ರಯೋಜನ ಪ್ರಯತ್ನ ಫಲಿಸುವುದಿಲ್ಲ.
ಸದಾ ಕಾಮಿಡಿ ಮಾಡುವ, ತಮಾಷೆಯಾಗಿ ಇರುವ ಯುವಕರನ್ನೇ ಇಷ್ಟಪಡುತ್ತಾರೆ ಎಂದೇನಿಲ್ಲ. ಅದು ಒಂದು ಹಂತದವರೆಗೆ ಮಾತ್ರ, ನಂತರದಲ್ಲಿ ಅವರಿಗೆ ತಾವು ಹೇಳಿದಂತೆ ಕೇಳುವ ತಮ್ಮಗುಟ್ಟನ್ನು ಯಾರಿಗೂ ಹೇಳದಂತೆ ಕಾಪಾಡಿಕೊಳ್ಳುವ ಯುವಕರನ್ನೇ ಇಷ್ಟಪಡೊದು. ಬೇರೆಯವರಲ್ಲಿ ನಗು ತರಬಲ್ಲ ಕಲೆ ಇರುವ ಯುವಕರನ್ನೇ ಯುವತಿಯರು ಹೆಚ್ಚು ಇಷ್ಟಪಡುತ್ತಾರೆ. ರೂಪವಂತನಲ್ಲದಿದ್ದರೂ ಯುವತಿಯರ ಗಮನ ಪಡೆಯಲು ಇದೇ ಮುಖ್ಯ ಗುಟ್ಟು. ಈ ಯುವಕರು ಯಾವಾಗಲೂ ಗಂಭೀರರಾಗಿ ಇರುವುದೇ ಇಲ್ಲ ಗಂಭೀರವಾಗಿ ಇರಲೇಬೇಕಾದ ಸಂದರ್ಭಗಳಿಗೆ ಹೊರತಾಗಿ ಇತರ ಸಂದರ್ಭಗಳಲ್ಲಿ ಚುರುಕಾಗಿದ್ದು ಸುತ್ತಮುತ್ತಲಿನವರಲ್ಲಿ ನಗೆಚಟಾಕಿ ಹಾರಿಸುತ್ತಾ ಸಮಯ ಕಳೆದದ್ದೇ ಗೊತ್ತಾಗಲಿಲ್ಲ ಎನ್ನಿಸುವಂತೆ ವರ್ತಿಸುವ ಯುವಕರು ಸುಲಭವಾಗಿ ಯುವತಿಯರ ಗಮನ ಸೆಳೆಯುತ್ತಾರೆ. ಇಂತಹ ಯುವಕರನ್ನು ಯುವತಿಯರು ಮೆಚ್ಚುತ್ತಾರೆ ಎನ್ನಲಾಗಿದೆ. ಆದರೆ ಯಾವುದೇ ಯುವತಿ ಯುವಕರ ಹಾಸ್ಯ ತೀರಾ ಹೆಚ್ಚಾಗುವುದನ್ನು ಇಷ್ಟಪಡುವುದಿಲ್ಲ. ಆದ್ದರಿಂದ ನಿಮ್ಮ ಪ್ರಯತ್ನಗಳು ತಿಳಿಹಾಸ್ಯದ ಮಿತಿಯಲ್ಲಿಯೇ ಇರಲಿ.