ಬೀಜಿಂಗ್: ನೀರಿನ ಮೇಲೆ ನಡೆಯುವುದಾ? ಹುಬ್ಬೇರಿಸಬೇಡಿ! ಚೀನಾದ ಬೌದ್ಧ ಭಿಕ್ಕುವೊಬ್ಬರು ನೀರಿನ ಮೇಲೆ ನಡೆದು ವಿಶ್ವ ದಾಖಲೆ ನಿರ್ಮಿಸಿದ್ದಾರೆ.
ಚೀನಾದ ಶಾವೋಲಿನ್ ಕುಂಗ್ ಫೂ ಬೌದ್ಧ ಭಿಕ್ಕು ಶೀ ಲಿಲಿಯಾಂಗ್ ನೀರಿನ ಮೇಲೆ 125 ಮೀಟರ್ ದೂರ ಮರದ ಹಲಗೆ ಮೇಲೆ ವೇಗವಾಗಿ ಕಾಲಿಟ್ಟು ನಡೆಯುವ ಮೂಲಕ ದಾಖಲೆ ಬರೆದಿದ್ದಾರೆ. ಶೀ ಈ ದಾಖಲೆ ಬರೆಯೋ ಮುನ್ನ ನೀರಿನ ಮೇಲೆ ವೇಗವಾಗಿ ಚಲಿಸಿ 3 ಬಾರಿ ತಮ್ಮ ಗುರಿ ಮುಟ್ಟುಲು ವಿಫಲವಾಗಿದ್ದರು. ಕೊನೆಗೂ ಛಲಬಿಡದೆ ತಮ್ಮ ಗುರಿಯನ್ನು ಸಾಧಿಸಿದ್ದರು.
ಈ ಮೂಲಕ ಶೀ ಲಿಲಿಯಾಂಗ್ ಈ ಹಿಂದಿನ ತಮ್ಮ ದಾಖಲೆಯನ್ನು ತಾವೇ ಮುರಿದು ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಚೀನಾದ ವಿಶ್ವ ಪ್ರಸಿದ್ಧ ಖ್ವಾನ್ ಜುವೋ ಶಾವೋಲಿನ್ ಟೆಂಪಲ್ ಸದಸ್ಯ, ಇದು ಕುಂಗ್ ಫೂ ಕಲೆಯ ಜನ್ಮ ಸ್ಥಳವಾಗಿದೆ.
200 ಮರದ ಹಲಗೆಯನ್ನು ತೇಲಿಬಿಟ್ಟು, ಶೀ ಲಿಲಿಯಾಂಗ್ ನೀರಿನ ಮೇಲೆ ವೇಗವಾಗಿ ಚಲಿಸಿ 125 ಮೀಟರ್ ಕ್ರಮಿಸಿ ಹೊಸ ವಿಶ್ವ ದಾಖಲೆ ಮಾಡಿದ್ದಾರೆ.