ಸಿಡ್ನಿ: ಒಸಾಮಾ ಬಿನ್ ಲ್ಯಾಡನ್ ಅಂಗರಕ್ಷಕ ಎಂದು ನಂಬಲಾದ ಸೌದಿ ಅರೇಬಿಯಾದ ಮೂಲದವನನ್ನು 10 ವರ್ಷದ ಬಂಧನದ ನಂತರ ಅಮೆರಿಕಾದ ಸೆರೆಮನೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಪೆಂಟಗನ್ ತಿಳಿಸಿದೆ.
ಎಬಿಸಿ ನ್ಯೂಸ್ ಪ್ರಕಾರ ಡಿಸೆಂಬರ್ ೨೦೧೦ರಲ್ಲಿ ಅಬ್ದುಲ್ ಶಾಲಾಭಿಯನ್ನು ಪಾಕಿಸ್ತಾನ ಪಡೆಗಳು ಬಂಧಿಸಿ ಅಮೆರಿಕಾಕ್ಕೆ ಒಪ್ಪಿಸಿದ್ದವು.
39 ವರ್ಷದ ಅಬ್ದುಲ್, ಅಲ್ ಕೈದ ಉಗ್ರಗಾಮಿ ಸಂಘಟನೆಯ ಸದಸ್ಯ ಮತ್ತು ಬಿನ್ ಲ್ಯಾಡೆನ್ ಗೆ ದೀರ್ಘ ಕಾಲದ ಅಂಗರಕ್ಷಕನಾಗಿದ್ದ ಎಂದು ಅಮೇರಿಕಾ ರಕ್ಷಣಾ ಇಲಾಖೆ ತಿಳಿಸಿತ್ತು.
ಅಮೆರಿಕಾದಲ್ಲಿ ನಡೆಯಬೇಕಿದ್ದ ಮತ್ತೊಂದು ದಾಳಿಯಲ್ಲಿ ಅವನನ್ನು ಆತ್ಮಹತ್ಯಾ ಬಾಂಬ್ ಸ್ಫೋಟಕನಾಗಿ ತರಬೇತಿ ನಿಡಲಾಗಿತ್ತು ಆದರೆ ಆ ದಾಳಿ ನಡೆದಿರಲಿಲ್ಲ ಎಂದು ಕೂಡ ಅಮೇರಿಕಾ ರಕ್ಷಣಾ ಇಲಾಖೆ ತಿಳಿಸಿತ್ತು.