ಮಿನಾ, ಸೆ.28: ಹಜ್ ಯಾತ್ರೆಯ ಸಂದರ್ಭ ಉಂಟಾದ ಕಾಲ್ತುಳಿತಕ್ಕೆ ಬಲಿಯಾದವರ ಭಾರತೀಯ ಯಾತ್ರಿಕರ ಸಂಖ್ಯೆ ಸೋಮವಾರ 45ಕ್ಕೆ ತಲುಪಿದೆ. ಅಧಿಕಾರಿಗಳು ಇಂದು ಇನ್ನೂ 10 ಶವಗಳನ್ನು ಗುರುತಿಸಿದ್ದಾರೆ.
ಮೃತ ಭಾರತೀಯರಲ್ಲಿ ಮೂವರು ಪಶ್ಚಿಮ ಬಂಗಾಳದವರು, ತಲಾ ಇಬ್ಬರು ಕೇರಳ ಹಾಗೂ ಜಾರ್ಖಂಡ್‌ನವರು ಹಾಗೂ ತಲಾ ಒಬ್ಬರು ತಮಿಳುನಾಡು ಹಾಗೂ ಮಹಾರಾಷ್ಟ್ರದವರೆಂದು ಜಿದ್ದಾದ ಹಜ್ ಕಾನ್ಸುಲೇಟ್ ತಿಳಿಸಿದೆ.
ಈ ಮೊದಲು, ರವಿವಾರ 13 ಮೃತದೇಹಗಳನ್ನು ಗುರುತಿಸುವುದರೊಂದಿಗೆ ಬಲಿಯಾದ ಭಾರತೀಯರ ಸಂಖ್ಯೆ 35ಕ್ಕೆ ತಲುಪಿತ್ತು. ಹಜ್ಜ್‌ನ ವೇಳೆ ಕಾಲ್ತುಳಿತದಲ್ಲಿ ಮೃತರಾಗಿರುವವರ ಒಟ್ಟು ಸಂಖ್ಯೆ 769. ಗಾಯಗೊಂಡವರ ಸಂಖ್ಯೆ 934 ಎಂದು ಸೌದಿ ಅಧಿಕಾರಿಗಳು ಹೇಳಿದ್ದಾರೆ. ಗಾಯಾಳುಗಳಲ್ಲಿ ಕನಿಷ್ಠ13 ಮಂದಿ ಭಾರತೀಯರಾಗಿದ್ದಾರೆ.
ಘಟನೆಯ ಕುರಿತು ತನಿಖೆಗೆ ಸಮಿತಿಯೊಂದನ್ನು ರಚಿಸುವಂತೆ ದೊರೆ ಸಲ್ಮಾನ್ ಆದೇಶಿಸಿದ್ದಾರೆ.