ವಾಷಿಂಗ್ಟನ್: ಪಾಕಿಸ್ತಾನದ ಬಳಿ 110 ರಿಂದ 130 ಅಣ್ವಸ್ತ್ರಗಳಿದ್ದು 2011 ರಲ್ಲಿ 90 ರಿಂದ 110 ಕ್ಕೆ ಏರಿಕೆಯಾಗಿದೆ ಎಂದು ಅಮೇರಿಕಾದ ಚಿಂತಕರ ಚಾವಡಿಯೊಂದು ಅಂದಾಜಿಸಿದೆ.
ಪಾಕ್ ಪ್ರಧಾನಿ ನವಾಜ್ ಷರೀಫ್ ಅಮೆರಿಕಾಗೆ ಭೇಟಿ ನೀಡಿರುವ ಹಿನ್ನೆಲೆಯಲ್ಲಿ ಈ ವರದಿ ಪ್ರಕಟವಾಗಿದ್ದು, ಮುಂದಿನ ಹತ್ತು ವರ್ಷಗಳಲ್ಲಿ ದಾಸ್ತಾನು ಮತ್ತಷ್ಟು ಹೆಚ್ಚಲಿದೆ ಎಂದು ಹೇಳಿದೆ. ಭಾರತದ ಶಸ್ತ್ರಾಗಾರ ಬೆಳವಣಿಗೆ ಹಾಗೂ ಪಾಕಿಸ್ತಾನ ಎಷ್ಟು ಪರಮಾಣು ಸಾಮರ್ಥ್ಯದ ಲಾಂಚರ್ ಗಳನ್ನು ನಿಯೋಜಿಸಲಿದೆ ಎಂಬುದು ಎರಡು ಪ್ರಮುಖ ಸಂಗತಿಗಳಾಗಿವೆ ಎಂದು ವರದಿ ಪ್ರಕಟಿಸಿರುವ ಹ್ಯಾನ್ಸ್ ಎಂ ಕ್ರಿಸ್ಟೆನ್ಸೆನ್ ರಾಬರ್ಟ್ ಎಸ್ ನಾರ್ರಿಸ್ ಹೇಳಿದ್ದಾರೆ.
ಪಾಕಿಸ್ತಾನದ ಕಳೆದ 20 ವರ್ಷಗಳ ಕಾರ್ಯಕ್ಷಮತೆ ನಿರೀಕ್ಷಿತ ಶಸ್ತ್ರಾಸ್ತ್ರಗಳ ನಿಯೋಜನೆಯನ್ನು ಅಂದಾಜಿಸಲಾಗಿದ್ದು 2025 ರ ವೇಳೆಗೆ ಪಾಕಿಸ್ತಾನದ ಶಸ್ತ್ರಾಸ್ತ್ರ ದಾಸ್ತಾನುಗಳಲ್ಲಿ ಅಣ್ವಸ್ತ್ರಗಳು 220 ರಿಂದ 250 ಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದೆ.
ಪಾಕಿಸ್ತಾನ ಆರು ರೀತಿಯ ಪರಮಾಣು ಸಾಮರ್ಥ್ಯವನ್ನು ಖಂಡಾಂತರ ಕ್ಷಿಪಣಿಗಳನ್ನು ಹೊಂದಿರುವಂತೆ ಕಾಣುತ್ತದೆ ಎಂದು ಅಮೆರಿಕಾದ ಚಿಂತಕರ ಚಾವಡಿ ಹೇಳಿದೆ.