ಅಂತರಾಷ್ಟ್ರೀಯ

ದೇಹದ ಹೊರಭಾಗದಲ್ಲಿದೇ ಈ ಪುಟ್ಟ ಬಾಲಕಿಯ ಹೃದಯ !

Pinterest LinkedIn Tumblr

32

ಮಾಸ್ಕೋ: ಪ್ರತಿಯೊಬ್ಬ ಮನುಷ್ಯನ ಹೃದಯ ದೇಹದ ಒಳಭಾಗದಲ್ಲಿರುತ್ತದೆ. ಸೃಷ್ಟಿಯ ವಿಚಿತ್ರವೋ ಏನೋ ಎಂಬಂತೆ, ಬಾಲಕಿಯೊಬ್ಬಳಿಗೆ ಹೃದಯ ದೇಹದ ಹೊರಭಾಗದಲ್ಲಿದೆ.

ರಷ್ಯಾದ 6 ವರ್ಷದ ಬಾಲಕಿ ವರ್ಸಿವಿಯಾ, ಪೆಥೋಲಜಿ ಆಫ್ ಕ್ಯಾಂಟ್ರೆಲಾ ಕಾಯಿಲೆಯಿಂದ ಬಳಲುತ್ತಿದ್ದು ಆಕೆಯ ಹೃದಯ ದೇಹದ ಹೊರಗಡೆ ಇದೆ. ಕೇವಲ ಒಂದು ಎಳೆ ಚರ್ಮದ ಪದರದಲ್ಲಿ ಹೃದಯವಿದೆ.

ಹುಟ್ಟಿನಿಂದಲೇ ಆಕೆಯ ಹೃದಯ ದೇಹದ ಹೊರಗಿದೆ, ಆದರೂ ಆಕೆ ಎಲ್ಲರಂತೆ ಜೀವನ ನಡೆಸುತ್ತಿದ್ದಾಳೆ.

ಈವರೆಗೆ ಬಾಲಕಿಗೆ ಯಾವುದೇ ತೊಂದರೆಯಾಗಿಲ್ಲ. ಬಾಲಕಿ ಈಗ ಶಸ್ತ್ರ ಚಿಕಿತ್ಸೆಗೆ ಮುಂದಾಗಿದ್ದು, ಚಿಕಿತ್ಸೆಗಾಗಿ ಅಮೆರಿಕಾಗೆ ತೆರಳಿದ್ದಾಳೆ. ಆದರೆ, ವೈದ್ಯರು ಮಾತ್ರ ಬಾಲಕಿಯಲ್ಲಿ ಬಿಪಿ ಹೆಚ್ಚಿರುವುದರಿಂದ ಶಸ್ತ್ರಚಿಕಿತ್ಸೆಗೆ ಒಳಪಡಿಸಲು ಕಷ್ಟವಿದೆ ಎಂದು ಹೇಳಿದ್ದಾರೆ.

Write A Comment