ಅಂತರಾಷ್ಟ್ರೀಯ

ಎರಡಕ್ಕಿಂತ ಹೆಚ್ಚು ಮಕ್ಕಳಿರುವ ಕುಟುಂಬದಲ್ಲಿ ಸಾಮಾನ್ಯವಾಗಿ ಮೊದಲನೇ ಮಗುವಿಗೆ ಬುದ್ಧಿಮತ್ತೆ ಹೆಚ್ಚು: ವರದಿ

Pinterest LinkedIn Tumblr

First-bornಲಂಡನ್: ಮಕ್ಕಳ ಬುದ್ಧಿಮತ್ತೆ ಬಗ್ಗೆ  ಹೊಸ ಸಂಶೋಧನಾ ವರದಿ ಪ್ರಕಟವಾಗಿದ್ದು, ಕುಟುಂಬದ ಮೊದಲ ಮಗು ತನ್ನ ಒಡಹುಟ್ಟಿದವರಿಗಿಂತ ಹೆಚ್ಚು ಬುದ್ಧಿಶಾಲಿಯಾಗಿರುತ್ತದೆ ಎಂದು ಹೇಳಿದೆ.

ಜರ್ಮನಿಯ ಲೈಪ್ಜಿಗ್ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಸಂಶೋಧನೆ ಪ್ರಕಾರ, ಕುಟುಂಬವೊಂದರಲ್ಲಿ ಮೊದಲು ಹುಟ್ಟುವ ಮಗುವಿಗೆ ತಂದೆ-ತಾಯಂದಿರು ಅತಿ ಹೆಚ್ಚು ಗಮನ ಕೊಡುವುದರಿಂದ ಹೆಚ್ಚು ಬುದ್ಧಿಶಾಲಿಯಾಗಿರುತ್ತಾರೆ. ಮೊದಲ ಮಗುವಿನ ನಂತರ ಹುಟ್ಟುವ ಮಕ್ಕಳ ಮೇಲೆ ಪೋಷಕರ ಗಮನ ಕೊಂಚ ಕಡಿಮೆಯಾಗುವುದೇ  ಹಿರಿಯ ಸಹೋದರ/ ಸಹೋದರಿಯರಿಗಿಂತ ಕಿರಿಯರ ಬುದ್ಧಿ ಮತ್ತೆ ಕಡಿಮೆ ಇರುವುದಕ್ಕೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪೋಷಕರು ಅತಿ ಹೆಚ್ಚು ಗಮನ ಕೊಡುವುದರಿಂದ ಮಕ್ಕಳು ಹೆಚ್ಚು ಕಲಿಯುತ್ತವೆ. ಆದ್ದರಿಂದ ಮೊದಲ ಮಗುವಿಗೆ ಹೆಚ್ಚು ಬುದ್ಧಿಮತ್ತೆ ಇರುತ್ತದೆಯಂತೆ.  ಆದರೆ ಎರಡು ಮಕ್ಕಳಿರುವ ಕುಟುಂಬದಲ್ಲಿ ಹೀಗಾಗುವುದಿಲ್ಲ. ಎರಡೇ ಮಕ್ಕಳಿರುವ ಕುಟುಂಬದಲ್ಲಿ ಎರಡೂ ಮಕ್ಕಳಿಗೆ ಪೋಷಕರು ಹೆಚ್ಚಿನ ಗಮನ ನೀಡಲು ಸಾಧ್ಯವಿರುವುದರಿಂದ ಹಿರಿಯ ಸಹೋದರ/ ಸಹೋದರಿಗಿಂತ ಕಿರಿಯರು ಹೆಚ್ಚು ಬುದ್ಧಿವಂತರಾಗುವ ಸಾಧ್ಯತೆಯೂ ಇದೆ ಎನ್ನುತ್ತಾರೆ ಸಂಶೋಧಕರು.  ಈ ಬಗೆಗಿನ ವರದಿ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ ಗೆ ಸಂಬಂಧಿಸಿದ ಜರ್ನಲ್ ನಲ್ಲಿ ಪ್ರಕಟವಾಗಿದೆ.

Write A Comment