ವಾಷಿಂಗ್ ಟನ್: ಅಮೆರಿಕಕ್ಕೆ ವಲಸೆ ಬರುವ ಮುಸ್ಲಿಂಮರನ್ನು ನಿಷೇಧಿಸಿದರೆ, ಭಯೋತ್ಪಾದನೆ ನಿಯಂತ್ರಣಗೊಳ್ಳುತ್ತದೆ ಎಂದು ಹೇಳಿರುವ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಪರೋಕ್ಷವಾಗಿ ಇಸಿಸ್ ಉಗ್ರ ಸಂಘಟನೆ ಉತ್ತಮ ನೇಮಕಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಹೇಳಿದ್ದಾರೆ.
ಡೋನಾಲ್ಡ್ ಟ್ರಂಪ್ ಇಸಿಸ್ ನ ಉತ್ತಮ ನೇಮಕಾಧಿಕಾರಿಯಾಗಿದ್ದಾರೆ. ಡೋನಾಲ್ಡ್ ಟ್ರಂಪ್ ಅವರ ಹೇಳಿಕೆಯ ದೃಶ್ಯಾವಳಿಯನ್ನು ತೋರಿಸುವ ಮೂಲಕ ಮುಸ್ಲಿಂ ಯುವಕರನ್ನು ಪ್ರಚೋದಿಸಿ ಇಸಿಸ್ ತನ್ನ ಉಗ್ರ ಸಂಘಟನೆಯ ಬಲವನ್ನು ಹೆಚ್ಚಿಸಿಕೊಳ್ಳುತ್ತಿವೆ. ಡೋನಾಲ್ಡ್ ಟ್ರಂಪ್ ನೀಡಿರುವ ಹೇಳಿಕೆಗೆ ಅಥವಾ ಅಮೆರಿಕದ ಹಿತಾಸಕ್ತಿ ವಿರೋಧಿಸುವ ಇಂತಹ ಧರ್ಮಾಂಧತೆಗೆ ಪ್ರತಿಕ್ರಿಯಿಸುವ ಅಗತ್ಯವಿಲ್ಲ ಹಿಲರಿ ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಾರೆ ಅಮೆರಿಕ ಅಧ್ಯಕ್ಷೀಯ ಚುನಾವಣಾ ಕಣ ರಂಗೇರುತ್ತಿದ್ದು, ಡೋನಾಲ್ಡ್ ಟ್ರಂಪ್ ನೀಡಿದ ಹೇಳಿಕೆ ಇದೀಗ ವಿಪಕ್ಷಗಳ ಪಾಲಿಗೆ ದಾಳವಾಗಿ ಪರಿಣಮಿಸಿದೆ.