ಅಂತರಾಷ್ಟ್ರೀಯ

ಸ್ಲೋವೇನಿಯಾ ಸಲಿಂಗ ವಿವಾಹ ಕುರಿತ ಪ್ರಸ್ತಾವನೆಗೆ ಸೋಲು

Pinterest LinkedIn Tumblr

salingaಸ್ಲೋವೇನಿಯಾ, ಡಿ.21-ಜಗತ್ತಿನಾದ್ಯಂತ ಭಾರೀ ಚರ್ಚೆಯಲ್ಲಿರುವ ಸಲಿಂಗ ವಿವಾಹ ವ್ಯವಸ್ಥೆ ಕುರಿತಂತೆ ನಡೆಸಲಾದ ಜನಾಭಿಪ್ರಾಯ ಸಂಗ್ರಹದಲ್ಲಿ ಸಲಿಂಗ ವಿವಾಹ ಪ್ರಸ್ತಾಪಕ್ಕೆ ಸೋಲುಂಟಾಗಿದೆ.

ಸಲಿಂಗ ವಿವಾಹ ಕಾನೂನು ಜಾರಿಯಾಗಬೇಕೆಂಬ ಬೇಡಿಕೆಗೆ ಭಾರೀ ಅಂತರದ ಸೋಲಾಗಿದೆ. ಸ್ಲೋವೇನಿಯಾ ಸರ್ಕಾರ ಈ ವಿಷಯವನ್ನು ಜನರ ಆಯ್ಕೆಗೇ ಬಿಟ್ಟಿತ್ತು. ಅದಕ್ಕಾಗಿ ನಡೆಸಲಾದ ಮತದಾನದಲ್ಲಿ ಪ್ರಸ್ತಾವನೆ ಭಾರೀ ಅಂತರದಿಂದ ಸೋಲು ಕಂಡಿತು ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಶೇ.63ರಷ್ಟು ಮತಗಳು ಸಲಿಂಗ ವಿವಾಹದ ವಿರುದ್ಧ ಚಲಾವಣೆಯಾಗಿದ್ದರೆ, ಶೇ.37 ಜನ ವಯಸ್ಕರು (ಪುರುಷ ಅಥವಾ ಮಹಿಳೆ)  ಸಲಿಂಗ ವಿವಾಹ ಮಾಡಿಕೊಳ್ಳುವುದರ ಪರ ಮತ ಚಲಾಯಿಸಿದ್ದಾರೆ. ಈಗ ಮುಂದೇನು ಮಾಡಬೇಕೆಂಬುದು ಸರ್ಕಾರದ ಪರಿಶೀಲನೆಯಲ್ಲಿದೆ.

Write A Comment