ಅಂತರಾಷ್ಟ್ರೀಯ

2015 ರಲ್ಲಿ ವಿದೇಶದಿಂದ ಭಾರತಕ್ಕೆ ಹೆಚ್ಚು ವಿದ್ಯಾರ್ಥಿಗಳ ಆಗಮನ

Pinterest LinkedIn Tumblr

smruti-iraniನವದೆಹಲಿ: ಭಾರತಕ್ಕೆ ಆಗಮಿಸುವವರ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆ 2015 ರಲ್ಲಿ ಏರಿಕೆ ಕಂಡಿದೆ ಎಂದು ಮಾನವ ಸಂಪನ್ಮೂಲ ಇಲಾಖೆ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ.

ಲೋಕಸಭೆಯಲ್ಲಿ ಮಾನವ ಸಂಪನ್ಮೂಲ ಇಲಾಖೆಗೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಭಾರತಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ 2014 ರಲ್ಲಿ ಕುಸಿದಿತ್ತು. ಆದರೆ 2015 ರಲ್ಲಿ ಏರಿಕೆಯಾಗಿದ್ದು ಈ ವರ್ಷ 66 ,885 ಕ್ಕೆ ಏರಿಕೆಯಾಗಿದೆ ಎಂದು ಹೇಳಿದ್ದಾರೆ.

2012 ರಲ್ಲಿ ಹೊರದೇಶದಿಂದ ಭಾರತಕ್ಕೆ ಬರುವ ವಿದ್ಯಾರ್ಥಿಗಳ ಸಂಖ್ಯೆ 76,753 ರಷ್ಟಿತ್ತು. 2013 ರಲ್ಲಿ 93 ,693 ರಷ್ಟಿದ್ದ ಸಂಖ್ಯೆ 2014 ರಲ್ಲಿ ಒಟ್ಟು 44 ,620 ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದರು. ಪ್ರಸಕ್ತ ವರ್ಷ ಮಲೇಷ್ಯಾದಿಂದ ಭಾರತಕ್ಕೆ ಅತಿ ಹೆಚ್ಚು ವಿದ್ಯಾರ್ಥಿಗಳು ಬಂದಿದ್ದು ನಂತರದ ಸ್ಥಾನದಲ್ಲಿ ಅಪ್ಘಾನಿಸ್ಥಾನ, ಬಾಂಗ್ಲಾದೇಶ ವಿದ್ಯಾರ್ಥಿಗಳಿದ್ದಾರೆ ಎಂದು ಸ್ಮೃತಿ ಇರಾನಿ ತಿಳಿಸಿದ್ದಾರೆ.

ಮಲೇಷ್ಯಾದಿಂದ 6 ,471 ವಿದ್ಯಾರ್ಥಿಗಳು, 5 ,605 ವಿದ್ಯಾರ್ಥಿಗಳು ಅಪ್ಘಾನಿಸ್ತಾನ, 5 ,431 ಬಾಂಗ್ಲಾದೇಶದಿಂದ ಬಂದಿದ್ದಾರೆ. ಸುಡಾನ್, ಯೆಮೆನ್, ಥೈಲ್ಯಾಂಡ್, ಶ್ರೀಲಂಕಾ, ಇರಾನ್, ನೈಜೀರಿಯಾ, ಕೊರಿಯಾದಿಂದ 2 ,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾರತಕ್ಕೆ ಬಂದಿದ್ದಾರೆ.

Write A Comment