ಅಂತರಾಷ್ಟ್ರೀಯ

ಮಿಸ್ ಕೊಲಂಬಿಯಾಗೆ ಈಗ ನೀಲಿ ಚಿತ್ರದಲ್ಲಿ ನಟಿಸಲು 1 ಮಿಲಿಯನ್ ಡಾಲರ್ ಆಫರ್

Pinterest LinkedIn Tumblr

miss-24fffಮೆಲ್ಬೊರ್ನ್: ಮಿಸ್ ಕೊಲಿಂಬಿಯಾಗೆ 2015ನೇ ಸಾಲಿನ ಭವನ ಸುಂದರಿ ಕಿರೀಟ ಕೈತಪ್ಪಿರಬಹುದು. ಆದರೆ ಅವರ ಬ್ಯಾಂಕ್ ಖಾತೆಯನ್ನು ತುಂಬಿಸಲು ಆಕೆಗೆ ನೀಲಿ ಚಿತ್ರದಲ್ಲಿ ಅಭಿನಯಿಸಲು ಬರೊಬ್ಬರಿ ಒಂದು ಮಿಲಿಯನ್ ಡಾಲರ್ ಆಫರ್ ಬಂದಿದೆ.

ಮೂಲಗಳ ಪ್ರಕಾರ, ವಿವಿದ್ ಎಂಟರ್ಟೈನ್ಮೆಂಟ್ ಮುಖ್ಯಸ್ಥ ಸ್ಟೀವ್ ಹಿರ್ಷ್ ಅವರು, ನಿರೂಪಕರ ಎಡವಟ್ಟಿನಿಂದಾಗಿ ಎರಡು ನಿಮಿಷದ ಭವನ ಸುಂದರಿಯಾಗಿದ್ದ ಕೊಲಂಬಿಯಾದ ಅರಿಯಾಡ್ನ ಗುಟೆರೆಜ್ ಅರೆವಲೊ ಅವರ ಹಿಂದೆ ಬಿದ್ದಿದ್ದು, ಖ್ಯಾತಿ ಹೆಚ್ಚಿಸಿಕೊಳ್ಳಲು ತಮ್ಮ ನೀಲಿ ಚಿತ್ರದಲ್ಲಿ ನಟಿಸುವಂತೆ ಆಹ್ವಾನ ನೀಡಿದ್ದಾರೆ ಎಂದು ನ್ಯೂಸ್.ಕಾಮ್ ವರದಿ ಮಾಡಿದೆ.

ಈ ಸಂಬಂಧ ಮಿಸಿ ಕೊಲಂಬಿಯಾಗೆ ಪತ್ರ ಬರೆದಿರುವ ಸ್ಟೀವ್, 1984ರಲ್ಲಿ ಮಿಸ್ ಅಮೆರಿಕಾ ಕಿರೀಟ ಧರಿಸಿದ ಬಳಿಕ ತನ್ನ ಹಳೆಯ ನಗ್ನ ಫೋಟೋಗಳನ್ನು ಬಿಡುಗಡೆ ಮಾಡುವ ಮೂಲಕ ಸುದ್ದಿಯಾಗಿದ್ದ ವನೆಸ್ಸಾ ವಿಲಿಯಮ್ಸ್ ಅವರನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ.

ನೀವು ನಟಿಸುವ ಅಶ್ಲೀಲ ಚಿತ್ರ ಪುನಃ ಭುವನ ಸುಂದರಿ ಖ್ಯಾತಿಯನ್ನು ತಂದುಕೊಡಲಿದೆ ಎಂದು ಸ್ಟೀವ್ ಮಿಸ್ ಕೊಲಂಬಿಯಾ ಅರೆವಲೊ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ.

Write A Comment