ಅಂತರಾಷ್ಟ್ರೀಯ

ಪುರುಷನನ್ನೇ ಅಪಹರಿಸಿ ಸಾಮೂಹಿಕ ಅತ್ಯಾಚಾರ ನಡೆಸಿ ಕಾರಿನಿಂದ ಎಸೆದು ಹೋದ ಮಹಿಳೆಯರು….!

Pinterest LinkedIn Tumblr

when_the_rapist

ಪೋರ್ಟ್ ಎಲಿಜಬೆತ್, ಡಿ.26: ಜಗತ್ತಿನಾದ್ಯಂತ ಪುರುಷರು ಮಹಿಳೆಯರ ಮೇಲೆ ಅತ್ಯಾಚಾರ ಎಸಗುವುದು ಸಾಮಾನ್ಯ ಸುದ್ದಿ. ಆದರೆ, ದಕ್ಷಿಣ ಆಫ್ರಿಕಾದಲ್ಲಿ ಬಾಲವೇ ನಾಯನ್ನು ಅಲ್ಲಾಡಿಸಿದ ಘಟನೆಯೊಂದು ನಡೆದು ಇಡೀ ವಿಶ್ವವೇ ಮೂಗಿನ ಮೇಲೆ ಬೆರಳಿಟ್ಟುಕೊಳ್ಳುವಂತಾಗಿದೆ.

ಏನು ಆ ಸುದ್ದಿ…. ಮೂವರು ಮಹಿಳೆಯರು ವ್ಯಕ್ತಿಯೊಬ್ಬನನ್ನು ಅಪಹರಿಸಿ, ಅವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ, ಅಪಹರಿಸಿದ ಸ್ಥಳದಿಂದ ನೂರಾರು ಕಿ.ಮೀ.ದೂರದಲ್ಲಿ ಕಾರಿನಿಂದ ಎಸೆದು ಹೋಗಿ ಅಚ್ಚರಿ ಮೂಡಿಸಿದ್ದಾರೆ. ಈ ವಿಲಕ್ಷಣ ಘಟನೆ ನಡೆದಿರುವುದು ದಕ್ಷಿಣ ಆಫ್ರಿಕದ ಪೋರ್ಟ್ ಎಲಿಜಬೆತ್ ಕ್ವಾಝಾಖೇಲೆ ನಗರದ ಹೊರವಲಯದಲ್ಲಿ. ಇನ್ನೂ ವಿಶೇಷವೆಂದರೆ ತಾವು ಅಪಹರಿಸಿದ 33 ವರ್ಷದ ಆ ವ್ಯಕ್ತಿಗೆ ಕುಡಿಯಲು ಎಂಥದೋ ಪಾನೀಯ ಕೊಟ್ಟಿದ್ದಾರೆ.

ನಂತರ ದೂರ ಪ್ರದೇಶಕ್ಕೆ ಕರೆದೊಯ್ದು ಅವನ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಮೂವರು ಮಹಿಳೆಯರು, ಮೂವರೂ ಒಂದೊಂದು ಪ್ಲಾಸ್ಟಿಕ್ ಚೀಲಗಳಲ್ಲಿ ಆ ವ್ಯಕ್ತಿಯ ವೀರ್ಯವನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ. ಪ್ಲಾಸ್ಟಿಕ್ ಚೀಲಗಳನ್ನು ಶೀತಲೀಕೃತ ಬಾಕ್ಸ್‌ನಲ್ಲಿ ಶೇಖರಿಸಿಕೊಂಡೊಯ್ದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಇದೊಂದು ವಿಚಿತ್ರ ಪ್ರಸಂಗವಾಗಿರುವುದರಿಂದ ಈ ಬಗ್ಗೆ ತನಿಖೆ ಹೇಗೆ ನಡೆಸಬೇಕೆಂಬ ಬಗ್ಗೆ ನಮಗೇ ಗೊಂದಲ ಉಂಟಾಗಿದೆ ಎನ್ನುತ್ತಾರೆ ಪೊಲೀಸರು.

Write A Comment