ಅಂತರಾಷ್ಟ್ರೀಯ

ಗೊತ್ತಾ? ಈ ಪುಟ್ಟ ಜೀವಿಗೆ ಉಂಟು ಸಾವು ಗೆಲ್ಲುವ ಸಾಮರ್ಥ್ಯ!

Pinterest LinkedIn Tumblr

26-hydra-webfffನ್ಯೂಯಾರ್ಕ್: ಸಾವನ್ನು ಗೆಲ್ಲಬಲ್ಲಂತಹ ಜೀವಿ ಯಾವುದಾದರೂ ಇದೆಯೇ? ಹೌದು ಎನ್ನುತ್ತಿದೆ ಹೊಸ ಸಂಶೋಧನೆ. ಈ ಸಂಶೋಧನೆಯ ಪ್ರಕಾರ ಜಗತ್ತಿನಾದ್ಯಂತ ಶುದ್ಧ ನೀರಿನಲ್ಲಿ ವಾಸಿಸುವ ಒಂದು ಸೆಂಟಿಮೀಟರ್ ಗಾತ್ರದ ಪುಟ್ಟ ‘ಹೈಡ್ರಾ’ ಎಂಬ ಸಂಯುಕ್ತ ಜೀವಿಗೆ ವಯಸ್ಸಾಗುವುದೇ ಇಲ್ಲ. ‘ಆದರ್ಶ ಪರಿಸರ’ದಲ್ಲಿ ಇದ್ದರೆ, ಅದು ಚಿರಂಜೀವಿಯಾಗಿ ಬದುಕುವಂತಹ ಸಾಮರ್ಥ್ಯನ್ನು ಹೊಂದಿದೆ.

‘ಆದರ್ಶ ಪರಿಸರ’ದಲ್ಲಿ ‘ಹೈಡ್ರಾ’ವು ವ್ಯದ್ಧಾಪ್ಯದ ಯಾವ ಸೂಚನೆಯನ್ನೂ ತೋರಿಸದೇ ಬದುಕುತ್ತದೆ. ಇಂತಹ ಸ್ಥಿತಿಯಲ್ಲಿ ಅದಕ್ಕೆ ಮರಣ ಪ್ರಾಪ್ತವಾಗುವ ಸಾಧ್ಯತೆ ಹೆಚ್ಚುವುದಿಲ್ಲ ಅಥವಾ ಪ್ರಾಪ್ತ ವಯಸ್ಸಿನ ಬಳಿಕ ವಯಸ್ಸಾದಂತೆ ಫಲವತ್ತತೆ ಇಳಿಯುವುದೂ ಇಲ್ಲ. ಬಹುಕೋಶೀಯ ಜೀವಿಗಳಲ್ಲಿ ಈ ಸ್ಥಿತಿ ಅನಿವಾರ್ಯ ಎಂಬುದು ಈವರೆಗಿನ ಚಿಂತನೆಯಾಗಿತ್ತು ಎಂದು ಸಂಶೋಧನೆ ತಿಳಿಸಿದೆ.

‘ಸಮರ್ಪಕ ಪರಿಸರದಲ್ಲಿ ಇದ್ದಲ್ಲಿ ಹೈಡ್ರಾ ಎಂದೆಂದಿಗೂ ಸಾವಿಲ್ಲದೆ ಬದುಕಬಲ್ಲುದು ಎಂಬುದನ್ನು ನಾನು ನಂಬುತ್ತೇನೆ’ ಎಂದು ಸಂಶೋಧಕರಲ್ಲಿ ಒಬ್ಬರಾದ ಅಮೆರಿಕದ ಕ್ಲೇರಿಮೊಂಟ್​ನ ಪೊಮಾನಾ ಕಾಲೇಜಿನ ಪ್ರಾಧ್ಯಾಪಕ ಡೇನಿಯಲ್ ಮಾರ್ಟಿನೆಝå್ ಹೇಳುತ್ತಾರೆ. ‘ಮುಪ್ಪಾಗುವಿಕೆಯನ್ನು ತಪ್ಪಿಸಿಕೊಳ್ಳಲು ಹೈಡ್ರಾಕ್ಕೆ ಸಾಧ್ಯವಿಲ್ಲ ಎಂದು ಸಾಬೀತು ಪಡಿಸುವ ಸಲುವಾಗಿ ನಾನು ನನ್ನ ಸಂಶೋಧನಾ ಪ್ರಯೋಗವನ್ನು ಆರಂಭಿಸಿದೆ. ಆದರೆ ಒಂದಲ್ಲ, ಎರಡು ಬಾರಿ ನಾನೇ ಕಲೆಹಾಕಿದ ಮಾಹಿತಿಯು ನನ್ನ ಯೋಚನೆಯೇ ತಪ್ಪು ಎಂಬುದನ್ನು ಸಾಬೀತು ಪಡಿಸಿತು’ ಎಂದು ಮಾರ್ಟಿನೆಝå್ ಹೇಳಿದ್ದಾರೆ.

ತನ್ನ ಎಲ್ಲಾ ನರಕೋಶಗಳೂ ಕಣ್ಮರೆಯಾದರೂ, ದೇಹದ ಯಾವುದಾದರೂ ಭಾಗದಿಂದ ಇಡೀ ದೇಹವನ್ನು ಪುನಾರಚಿಸಿಕೊಳ್ಳುವ ಸಾಮರ್ಥ್ಯ ಈ ಪುಟ್ಟ ಜೀವಿಗೆ ಇದೆ ಎಂಬುದು ಸಂಶೋಧನೆಯಿಂದ ಸಾಬೀತಾಗಿದೆ ಎಂದು ವರದಿ ತಿಳಿಸಿದೆ. ಆದರೆ ವೈರಿದಾಳಿ, ಮಾಲಿನ್ಯ ಮತ್ತು ರೋಗಗಳ ಪರಿಸರದಲ್ಲಿ ಈ ಜೀವಿ ‘ಜಿರಂಜೀವಿ’ಯಾಗಿ ಬದುಕುವ ಸಾಧ್ಯತೆಗಳು ಕಡಿಮೆ ಎಂದೂ ವರದಿ ಹೇಳಿದೆ.

Write A Comment