ಅಂತರಾಷ್ಟ್ರೀಯ

ಸಿರಿಯಾದಲ್ಲಿ ಎರಡು ಬಾಂಬ್ ಸ್ಪೋಟ, 32 ಸಾವು

Pinterest LinkedIn Tumblr

syria-bomb_web-ಸಿರಿಯಾ : ಎರಡು ಪ್ರತ್ಯೇಕ ಸರಣಿ ಬಾಂಬ್ ಸ್ಪೋಟದಲ್ಲಿ 32 ಜನ ಮೃತರಾಗಿ ಇತರ 90 ಕ್ಕೂ ಹೆಚ್ಚು ಜನ ಗಾಯಗೊಂಡಿರುವ ಘಟನೆ ಅಲ್- ಜಹ್ರಾ ಜಿಲ್ಲೆಯ ಹಾಮ್ಸ್ ನಗರದಲ್ಲಿ ಘಟಿಸಿದೆ ಎಂದು ಸಿರಿಯಾದ ಮಾನವ ಹಕ್ಕು ವೀಕ್ಷಣಾಲಯ ವರದಿ ಮಾಡಿದೆ.

ಹಾಮ್ಸ್ ನಗರದಲ್ಲಿ 6 ಜನರನ್ನು ಹತರಾಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ. ಅಲ್ ಜಹ್ರಾ ಜಿಲ್ಲೆಯು ಸಿರಿಯಾದ ಷಿಯಾ ಪಂಗಡದ ಅಲಾವೈತ್ ಬುಡಕಟ್ಟು ಜನಾಂಗ ಹಾಗೂ ಸಿರಿಯಾ ಸರ್ಕಾರದ ಗಣ್ಯ ವ್ಯಕ್ತಿಗಳು ವಾಸಿಸುವ ಸ್ಥಳವಾಗಿದೆ.

ಇದಕ್ಕೂ ಮೊದಲು ಜಿಲ್ಲೆಯ ಆಸುಪಾಸಿನಲ್ಲಿ ಕಳೆದ ತಿಂಗಳ ಆದಿಯಲ್ಲಿ ಸಂಭವಿಸಿದ ಸ್ಪೋಟದಲ್ಲಿ 20 ಕ್ಕೂ ಹೆಚ್ಚು ಮಂದಿ ಮೃತರಾಗಿದ್ದರು. ಸ್ಪೋಟದ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಹೊತ್ತುಕೊಂಡಿದೆ.

Write A Comment