ಅಂತರಾಷ್ಟ್ರೀಯ

ಐಸಿಸ್ ಉಗ್ರರಿಗೆ ತಕ್ಕ ಪಾಠ ಕಲಿಸಿದ ಆಫ್ಘನ್ ಗ್ರಾಮಸ್ಥರು

Pinterest LinkedIn Tumblr

Afghan-e1451302842468-720x340ಜಲಾಲಾಬಾದ್: ತಮ್ಮ ವಿಧ್ವಂಸಕ ಕೃತ್ಯಗಳಿಂದ ಜಗತ್ತಿನೆಲ್ಲಡೆ ಭೀತಿ ಹುಟ್ಟಿಸಿರುವ ಐಸಿಸ್ ಉಗ್ರರಿಗೆ ಆಫ್ಘಾನಿಸ್ತಾನದ ಪುಟ್ಟ ಹಳ್ಳಿಯ ಜನರು ಸೂಕ್ತ ಪಾಠ ಕಲಿಸಿದ್ದಾರೆ.

ಆಫ್ಘಾನಿಸ್ತಾನದ ನಗರಹಾರ್ ಪ್ರಾಂತ್ಯದ ಆಚಿನ್ ಜಿಲ್ಲೆಯಲ್ಲಿ ಗ್ರಾಮಸ್ಥರು ಸಶಸ್ತ್ರ ಗುಂಪುಗಳ ಮೂಲಕ ಐಸಿಸ್ ಮತ್ತು ತಾಲಿಬಾನ್ ಉಗ್ರರ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟಗಾರರು ನಾಲ್ವರು ಐಸಿಸ್ ಉಗ್ರರನ್ನು ಬಂಧಿಸಿ ನಂತರ ಅವರ ತಲೆ ಕಡಿದು ರಸ್ತೆ ಬದಿಯಲ್ಲಿ ಇಟ್ಟು ತಮ್ಮ ಉಗ್ರರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.

ಆಫ್ಘಾನಿಸ್ತಾನದ ಮಾಜಿ ಸ್ಪೀಕರ್ ಹಾಜಿ ಜಹೀರ್ ಅವರ ಪರವಾಗಿ ಹೋರಾಡುತ್ತಿರುವ ಈ ಗುಂಪು ತಮ್ಮ ಪ್ರದೇಶದಲ್ಲಿ ಐಸಿಸ್ ಉಗ್ರರು ನೆಲೆ ನಿಲ್ಲದಂತೆ ಕ್ರಮ ತೆಗೆದುಕೊಂಡಿದ್ದಾರೆ. ಸ್ಥಳೀಯ ಆಡಳಿತದೊಂದಿಗೆ ಸೇರಿ ರೇಡಿಯೋ ತರಂಗಗಳನ್ನು ತಡೆದು ಐಸಿಸ್ ತತ್ವಗಳ ಪ್ರಸಾರಕ್ಕೆ ತಡೆಯೊಡ್ಡುವ ಪ್ರಯತ್ನ ನಡೆಸಿದ್ದಾರೆ.

Write A Comment