ಅಂತರಾಷ್ಟ್ರೀಯ

ಮೋದಿ, ಷರೀಫ್‌ರನ್ನು ವಾಷಿಂಗ್‌ಟನ್‌ಗೆ ಆಹ್ವಾನಿಸಿದ ಒಬಾಮ

Pinterest LinkedIn Tumblr

obama-modi

ಕರಾಚಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ದಿಢೀರ್ ಭೇಟಿ ನೀಡಿದ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು, ಮೋದಿ ಹಾಗೂ ಪಾಕ್ ಪ್ರಧಾನಿ ನವಾಜ್ ಷರೀಫ್ ಅವರನ್ನು ವಾಷಿಂಗ್‌ಟನ್‌ಗೆ ಆಹ್ವಾನಿಸಿದ್ದಾರೆ.

ಮುಂದಿನ ವರ್ಷ ಮಾರ್ಚ್ 31ರಿಂದ ಏಪ್ರಿಲ್ 1ರವರೆಗೆ ನಡೆಯುವ ಪರಮಾಣು ಭದ್ರತಾ ಸಮ್ಮೇಳನದಲ್ಲಿ ಭಾಗವಹಿಸುವಂತೆ ಉಭಯ ದೇಶಗಳ ನಾಯಕರಿಗೆ ಅಮೆರಿಕ ಅಧ್ಯಕ್ಷರು ಆಹ್ವಾನ ನೀಡಿದ್ದಾರೆ. ಆದರೆ ಈ ಆಹ್ವಾನದ ಕುರಿತು ಅಮೆರಿಕ ಇನ್ನೂ ಅಧಿಕೃತ ಪ್ರಕಟಣೆ ನೀಡಿಲ್ಲ ಎಂದು ಎಕ್ಸ್‌ಪ್ರೆಸ್ ಟ್ರಿಬುನ್ ವರದಿ ಮಾಡಿದೆ.

2016ರ ಪರಮಾಣು ಭದ್ರತಾ ಸಮ್ಮೇಳನ ಭಾರತ-ಪಾಕಿಸ್ತಾನ ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ವೇದಿಕೆ ಕಲ್ಪಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

2014ರಲ್ಲಿ ಒಬಾಮ ನೇತೃತ್ವದಲ್ಲೇ 4ನೇ ಪರಮಾಣು ಭದ್ರತಾ ಸಮ್ಮೇಳನ ನಡೆದಿತ್ತು.

Write A Comment